ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಮೃತ್ ಪೌಲ್ ಪಿಎಸ್?ಐಗಳ ಮೊದಲ ನೇಮಕ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ಹಣ ಮಾಡಲು ಆಕಾಂಕ್ಷಿಗಳ ಎಲ್ಲ ವಿವರಗಳನ್ನು ತಿಳಿದ ಬಳಿಕ ಡೀಲ್ ಗೆ ಓಕೆ ಮಾಡಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.
ಪಿಎಸ್ ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಇಲ್ಲಿಯವರೆಗೆ ಬಂಧಿತ ಪ್ರಮುಖ ಆರೋಪಿಗಳು ಅಭ್ಯರ್ಥಿಗಳಿಂದ ವಸೂಲಿ ಮಾಡಿದ ಹಣದಲ್ಲಿ ಅಮೃತ್ ಪೌಲ್ ಅವರಿಗೆ ಪಾಲು ನೀಡಿದ್ದು ಅದು ಕೋಟ್ಯಾಂತರ ರೂಗಳಾಷ್ಟಾಗಿದೆ ಎನ್ನುವುದು ತನಿಖೆಯಲ್ಲಿ ಸಾಬೀತಾಗಿದೆ.
ಕಳೆದ ೨೦೨೦ರ ಫೆ.೨ರಂದು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅಮೃತ್ ಪೌಲ್ ವಿಭಾಗದ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ್ದರು.
ನೇಮಕಾತಿ ವಿಭಾಗದಲ್ಲಿ ಠಿಕಾಣಿ ಹೂಡಿದ್ದ ಡಿವೈಎಸ್?ಪಿ ಶಾಂತಕುಮಾರ್ ಜೊತೆ ಹಲವು ಬಾರಿ ಚರ್ಚೆ ನಡೆಸಿದ್ದು ಹಣಕಾಸಿನ ವ್ಯವಹಾರಗಳ ಪ್ರಸ್ತಾಪದ ವೇಳೆ ನೇಮಕಾತಿ ಡೀಲ್ ನ ಮಾತುಕತೆ ನಡೆಸಲಾಗಿತ್ತು.ಅದಕ್ಕೆ ಎಡಿಜಿಪಿ ಗ್ರೀನ್ ಸಿಗ್ನಲ್ ತೋರಿಸುತ್ತಿದರು.
ಇದರ ಬೆನ್ನಲ್ಲೇ ಕೋವಿಡ್ ಲಾಕ್? ಡೌನ್ ತೆರವಾದ ನಂತರ ೨೦೨೧ರ ಫೆ.೨೨ಕ್ಕೆ ೫೪೫ ಎಸ್ಐ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿತ್ತು ಡೀಲ್ ಬಗ್ಗೆ ಮೊದಲೇ ಎಡಿಜಿಪಿ ಸಿಗ್ನಲ್ ತೋರಿಸುತ್ತಿದ್ದರಿಂದ ತನ್ನ ಕೆಳಹಂತದ ಆರ್?ಎಸ್?ಐ ಲೋಕೇಶಪ್ಪ, ಸಬ್ ಇನ್ಸ್‌ಪೆಕ್ಟರ್ ಲೋಕೇಶ್, ಮುಖ್ಯಪೇದೆ ಲೋಕೇಶ್, ಎಸ್?ಡಿಎ ಹರ್ಷ, ಎಫ್?ಡಿಎ ಶ್ರೀಧರ್ ಗ್ಯಾಂಗ್ ಕಟ್ಟಿಕೊಂಡು ಸಂಚು ಮಾಡಿದ್ದ. ಪ್ರತಿಯೊಂದು ವಿಚಾರವನ್ನು ಎಡಿಜಿಪಿ ಪೌಲ್ ಬಳಿ ರ್ಚಚಿಸಿದ ನಂತರವೇ ಡೀಲ್?ಗಳು ನಡೆಯುತ್ತಿದ್ದವು.
ಖಾಸಗಿ ಏಜೆಂಟ್?ಗಳು, ರಾಜಕೀಯ ಹಿನ್ನೆಲೆಯುಳ್ಳವರು ಮತ್ತು ಕೆಲ ಪೊಲೀಸರೇ ದಲ್ಲಾಳಿ ಸ್ಥಾನದಲ್ಲಿ ನಿಂತು ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ಅಧಿಕಾರಿಗಳೊಂದಿಗೆ ಕೈ ಜೋಡಿಸಿದರು. ಒಂದು ಹುದ್ದೆಗೆ ೬೦ ರಿಂದ ೧ ಕೋಟಿ ರೂ. ವರೆಗೂ ಡೀಲ್ ಕುದುರಿಸಿ ಒಂದು ಕಂತಿನಲ್ಲಿ ಹಣ ಸಹ ಪಡೆದಿದ್ದರು. ಪಿಎಸ್?ಐ ಹುದ್ದೆ ಆಕಾಂಕ್ಷಿಗಳು ಸಾಲ, ಆಸ್ತಿ ಮಾರಾಟ ಮಾಡಿ ಮತ್ಯಾವುದೋ ರೂಪದಲ್ಲಿ ಹಣ ತಂದು ಏಜೆಂಟ್?ಗಳ ಮೂಲಕ ಉನ್ನತ ಅಧಿಕಾರಿಗಳಿಗೆ ತಲುಪಿಸಿದ್ದರು.
ಪರೀಕ್ಷಾ ಕೇಂದ್ರದಲ್ಲೇ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಬರೆಯಲು ಮತ್ತು ಅವರಿಗೆ ಬೇಕಾದ ಅಭ್ಯರ್ಥಿ ಪಕ್ಕದಲ್ಲೇ ಕೂರುವಂತೆ ಪ್ರವೇಶ ಪತ್ರ ಸಿದ್ದಪಡಿಸಿದ್ದರು. ೨೦೨೧ರ ಅ.೩ರಂದು ರಾಜ್ಯದ ೯೦ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿದ್ದರು. ೨೦೨೨ರ ಜ.೧೯ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಸಹ ಪ್ರಕಟ ಮಾಡಿದ್ದರು. ತಮ್ಮ ಡೀಲ್ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಹೆಸರನ್ನು ತಾತ್ಕಾಲಿಕ ಪಟ್ಟಿಯಲ್ಲಿ ಬರುವಂತೆ ಮಾಡಿ ಅಂತಿಮ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು. ಎಡಿಜಿಪಿ ಅಮೃತ್ ಪೌಲ್ ಅಧಿಕಾರ ವ್ಯಾಪ್ತಿಯಲ್ಲಿಯೇ ಎಲ್ಲ ಅಕ್ರಮ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪರಿವೀಕ್ಷಕರು ಬುಕ್:
ಲಿಖಿತ ಪರೀಕ್ಷೆ ನಡೆಯುವ ಕೊಠಡಿಗೆ ತಮಗೆ ಬೇಕಾದ ಪರಿವೀಕ್ಷಕರನ್ನೇ ನೇಮಕ ಮಾಡಿಕೊಂಡು ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಬ್ಲೂಟೂತ್ ಬಳಕೆಗೆ ಅಥವಾ ಉತ್ತರ ಹೇಳಿಕೊಡುವುದು. ಓಎಂಆರ್ ಶೀಟ್ ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಸೀಲ್ ಮಾಡುವುದು. ಇಲ್ಲವಾದರೇ ಓಎಂಆರ್ ಶೀಟ್ ಖಾಲಿ ಬಿಟ್ಟಿರುವ ಅಭ್ಯರ್ಥಿಗಳ ಹೆಸರು, ನೋಂದಣಿ ಸಂಖ್ಯೆಯನ್ನು ಬರೆದು ದಾಖಲೆ ಮಾಡದೆ ನಿರ್ಲಕ್ಷ್ಯ ತೊರುವ ಮೂಲಕ ಅಕ್ರಮಕ್ಕೆ ದಾರಿ ಮಾಡಿಕೊಡುವಂತೆ ಪರಿವೀಕ್ಷಕರಿಗೆ ಸೂಚನೆ ನೀಡಲಾಗಿತ್ತು.
ಕ್ಯಾಮಾರಾ ಆಫ್ :
ಲಿಖಿತ ಪರೀಕ್ಷೆ ಪತ್ರಿಕೆ-೧ರಲ್ಲಿ ೫೦ ಅಂಕ ಮತ್ತು ಪತ್ರಿಕೆ-೨ರಲ್ಲಿ ೧೫೦ ಅಂಕಗಳಿಗೆ ನಡೆದಿದೆ. ಸಹಜವಾಗಿಯೇ ಹೆಚ್ಚು ಅಂಕ ಪಡೆದವರು ಹುದ್ದೆ ಗಿಟ್ಟಿಸುತ್ತಿದ್ದರು. ಪತ್ರಿಕೆ-೧ರಲ್ಲಿ ೫೦ಕ್ಕೆ ಪ್ರಬಂಧ (೨೦ ಅಂಕ), ಸಾರಾಂಶ ಬರಹ (೧೦ ಅಂಕ), ಭಾಷಾಂತರಕ್ಕೆ (೨೦ ಅಂಕ) ನಿಗದಿ ಮಾಡಲಾಗಿತ್ತು. ಮೊದಲ ಪತ್ರಿಕೆಯಲ್ಲಿ ಬರೆಯಲು ಬರುವುದಿಲ್ಲ ಎಂದಾದರೆ ಪತ್ರಿಕೆ-೨ನಲ್ಲಿ ಹೆಚ್ಚು ಅಂಕ ಬರುವಂತೆ ಮಾಡಿದ್ದರು. ಅಧಿಕಾರಿಗಳ ಸೂಚನೆ ಮೇರೆಗೆ ಅಭ್ಯರ್ಥಿಗಳು, ಓಎಂಆರ್ ಶೀಟ್ ಖಾಲಿ ಬಿಟ್ಟಿದ್ದರು. ಪರೀಕ್ಷಾ ಕೇಂದ್ರದಲ್ಲಿಯೇ ಸೀಲ್ ಮಾಡುವ ಮೊದಲು ಸಿಸಿ ಕ್ಯಾಮರಾ ಆಫ್ ಮಾಡಿ ಒಎಂಆರ್ ಶೀಟ್ ತಿದ್ದಿ ಹೆಚ್ಚಿನ ಅಂಕ ಬರುವಂತೆ ಮಾಡಿದ್ದರು. ಕೇಂದ್ರದಲ್ಲಿ ಸಾಧ್ಯವಾಗದೆ ಇದ್ದಾಗ ಅರಮನೆ ರಸ್ತೆ ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ ಒಎಂಆರ್ ಶೀಟ್ ಬಂದಾಗ ಸ್ವತಃ ಎಡಿಜಿಪಿ ಅವರೇ ಬೀಗದ ಕೀಯನ್ನು ಡಿವೈಎಸ್ ಪಿ ಶಾಂತಕುಮಾರ್ಗೆ ಕೊಟ್ಟು ಸಿಸಿ ಕ್ಯಾಮರಾ ಆಫ್ ಮಾಡಿ ಬೆಳಗಿನ ಜಾವ ಒಎಂಆರ್ ಶೀಟ್ ತಿದ್ದಿಸಿರುವುದು ಬೆಳಿಕಿಗೆ ಬಂದಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


