ಸರಗೂರು ಮತ್ತು ನಂಜನಗೂಡು ತಾಲ್ಲೂಕಿನ ಜೀವನದಿ ನುಗು ಜಲಾಶಯ ಭರ್ತಿ ಯಾಗಿದ್ದು, ಜಲಾಶಯದಿಂದ ನೀರನ್ನು ಹೊರ ಬಿಡಲಾಗಿದೆ.
ಕಳೆದ ಒಂದು ವಾರದಿಂದ ಸತತವಾಗಿ ಕೇರಳದ ವಯನಾಡು ಜಿಲ್ಲೆ ಹಾಗೂ ಗುಂಡ್ಲುಪೇಟೆ ತಾಲ್ಲೂಕು ಮತ್ತು ತಾಲ್ಲೂಕಿನ ಗಡಿಭಾಗದ ಮಲಬಾರ್ ಅರಣ್ಯ ಪ್ರದೇಶದಲ್ಲಿ ಅಧಿಕ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ 3420 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಈ ವರ್ಷ ಅವಧಿಗಿಂತ ಬೇಗ ಜಲಾಶಯ ಭರ್ತಿಯಾಗಿದೆ.
ಜಲಾಶಯದ ನೀರಿನ ಸರಾಸರಿ ಮಟ್ಟ 110 ಅಡಿ ಇದ್ದು, ಪ್ರಸ್ತುತ 108.5 ಅಡಿ ಇದ್ದು ಜಲಾಶಯದ ಭದ್ರತಾ ದೃಷ್ಟಿಯಿಂದ 1.5 ಅಡಿ ಬಾಕಿ ಉಳಿಸಿಕೊಂಡು ಜಲಾಶಯಕ್ಕೆ ಬಂದಷ್ಟು ನೀರನ್ನು ನದಿಗೆ ಬಿಡಲಾಗಿದೆ.
ಶನಿವಾರ ಸಂಜೆಗೆ 3,420 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 3,390 ಕ್ಯೂಸೆಕ್ ನೀರನ್ನು ಜಲಾಶಯದ ಕ್ರಸ್ಟ್ ಗೇಟ್ ಮೂಲಕ 500 ಕ್ಯೂಸೆಕ್ ಹಾಗೂ 300 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನಾ ಘಟಕದಿಂದ ನದಿಗೆ ಬಿಡಲಾಗಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತಡವಾಗಿ ಮಳೆ ಆದ ಕಾರಣ ಡಿಸೆಂಬರ್ ತಿಂಗಳಲ್ಲಿ ಜಲಾಶಯ ಭರ್ತಿಯಾಗಿತ್ತು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಜಲಾಶಯದ ನೀರಿನ ಮಟ್ಟ 100 ಅಡಿ ಇತ್ತು ಕೇವಲ ಐದು ದಿನದಲ್ಲಿ 8 ಅಡಿ ನೀರು ಜಲಾಶಯಕ್ಕೆ ಶೇಖರಣೆ ಆಗಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
2018 ರಿಂದ ಸತತವಾಗಿ ಜಲಾಶಯ ಭರ್ತಿಯಾಗುತ್ತಿದ್ದು ಈ ವರ್ಷ ಅವಧಿಗಿಂತ ಮುನ್ನ ಜಲಾಶಯ ಭರ್ತಿಯಾಗಿದೆ. ನುಗು ಜಲಾಶಯ ಅಚ್ಚುಕಟ್ಟಿನಲ್ಲಿ 18,110 ಎಕ್ಕರೆ ಪ್ರದೇಶಕ್ಕೆ ನೀರು ಉಣಿಸಲಾಗುತ್ತದೆ. ಸರಗೂರು ತಾಲ್ಲೂಕಿನ ಸುಮಾರು 3 ರಿಂದ 4 ಸಾವಿರ ಎಕ್ಕರೆ ಜಮೀನಿಗೆ ಮಾತ್ರ ಜಲಾಶಯದಿಂದ ಅನುಕೂಲ, ನಂಜನಗೂಡು ತಾಲ್ಲೂಕಿನ 15 ಸಾವಿರ ಎಕ್ಕರೆ ಜಮೀನಿಗೆ ನುಗು ಜಲಾಶಯದಿಂದ ನೀರು ಹರಿಸಲಾಗುತ್ತದೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಅಧಿಕ ಮಳೆ ಆಗುತ್ತಿರುವ ಕಾರಣ ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದ ಭದ್ರತ ದೃಷ್ಟಿಯಿಂದ ನದಿಗೆ ನೀರು ಹರಿಸಲಾಗುತ್ತಿದೆ. ಮಳೆ ಹೆಚ್ಚಾದರೆ ನದಿ ಮೂಲಕ ಇನ್ನೂ ಹೆಚ್ಚಿನ ನೀರನ್ನು ಹರಿಸಲಾಗುತ್ತದೆ. ಹಾಗಾಗಿ ನುಗು ಜಲಾಶಯದ ನದಿ ಪಾತ್ರದ ಜನರು ಎಚ್ಚರ ವಹಿಸಬೇಕು. ನುಗು ಜಲಾಶಯ ಇಂಜಿನಿಯರ್ ತಿಳಿಸಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


