ತಿಪಟೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ತಂತ್ರಜ್ಞಾನ ಆಧರಿತ ಶಿಕ್ಷಣವನ್ನು ನೀಡಲಾಗಿದ್ದು ಕಲಿಕೆಗೆ ಪೂರಕವಾಗಿ ತಾಂತ್ರಿಕತೆ ಹಾಗೂ ತರಗತಿ ವಾರ ವಿಷಯವನ್ನು ವಿಂಗಡಿಸಿ ಬೋಧಿಸಲಾಗುತ್ತಿದೆ. ಈ ಶಿಕ್ಷಣ ಕ್ರಮ ದೇಶದಲ್ಲಿ ಮಾದರಿಯಾಗಿ ಇದ್ದು ಇದನ್ನು ಬೇರೆ ರಾಜ್ಯಗಳು ಅಳವಡಿಸಿಕೊಳ್ಳುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎಸ್.ಸಿ. ಅಶ್ವತ್ಥ್ ನಾರಾಯಣ ತಿಳಿಸಿದರು
ತಾಲೂಕು ರಂಗಾಪುರ ಬಳಿ ತುಮಕೂರು ವಿಶ್ವವಿದ್ಯಾನಿಲಯದಿಂದ ತಿಪಟೂರು ಸ್ನಾತಕೋತ್ತರ ಕೇಂದ್ರ ಕಲ್ಪ ಸಿರಿ ನೂತನ ಕ್ಯಾಂಪಸ್ ಗೆ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೆರಗೋಡಿ ರಂಗಾಪುರ ಸುಕ್ಷೇತ್ರ ಅಧ್ಯಕ್ಷರು ಆದ ಶ್ರೀ ಗುರುಪರಾಗದೇಶಿ ಸ್ವಾಮೀಜಿ ಮಾತನಾಡಿ, ಯುವ ಜನತೆ ದೇಶದ ಸಂಸ್ಕೃತಿ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸುಸಂಸ್ಕೃತ ಬದುಕು ಕಟ್ಟಿಕೊಳ್ಳಬೇಕು, ತಂದೆ ತಾಯಿಗಳು ತಮ್ಮೆಲ್ಲ ಕಷ್ಟಗಳನ್ನು ಬದಿಗಿಟ್ಟು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ ಎಂದರು.
ಈ ಕಾರ್ಯಕ್ರಮದಲ್ಲಿ ತುಮಕೂರಿನ ವಿವಿ ಕುಲಪತಿ ಪ್ರೊಫೆಸರ್ ಕೇಶವ ಅಧ್ಯಕ್ಷತೆ ವಹಿಸಿದ್ದರು. ಪ್ರೊಫೆಸರ್ ಕೆ. ಶಿವ ಚಿತ್ತಪ್ಪ, ಸಿಂಡಿಕೇಟ್ ಸದಸ್ಯ ಸುನಿಲ್ ಪ್ರಸಾದ್ ಕುಮಾರ್, ಆಸ್ಪತ್ರೆ ವೈದ್ಯರಾದ ಡಾ.ಶ್ರೀಧರ್ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಉಪಸ್ಥಿತರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz