ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದಲ್ಲಿ ಗುರುಪೂರ್ಣಿಮೆಯನ್ನು ಹಿರಿಯೂರು ನಗರದ ಬಸವರಾಜ್ ಆಸ್ಪತ್ರೆ ಯ ರಸ್ತೆಯಲ್ಲಿರುವ ಸಾಯಿಬಾಬಾ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳು ಸಾಯಿಬಾಬಾ ಸ್ವಾಮಿ ದೇವಸ್ಥಾನದಲ್ಲಿ ಗುರು ಪೂರ್ಣಿಮೆಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಿದರು.
ಗುರುಪೂರ್ಣಿಮೆ ನಿಮಿತ್ತ ಹಿರಿಯೂರು ನಗರದ ರಾಯರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಿರಿಯೂರು ನಗರದ ಬಸವರಾಜ್ ಹಾಸ್ಪಿಟಲ್ ರಸ್ತೆಯಲ್ಲಿರುವ ಸಾಯಿಬಾಬಾ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಾಕಡಾರತಿ, ಮಹಾಭಿಷೇಕ, ಮಂಗಲಸ್ನಾನ, ಅಲಂಕಾರ, ಆರತಿ ನಡೆಯಿತು. ನೂರಾರು ಜನರು ರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮಗಳು ಸಹ ನಡೆದವು.
ಬೆಳಗಿನಿಂದಲೇ ಭಕ್ತರು ಭಜನೆಯಲ್ಲಿ ನಿರತರಾಗಿದ್ದರು. ಹೋಮ-ಹವನಗಳಲ್ಲಿ ಪಾಲ್ಗೊಂಡರು. ನಂತರ ರಾಯರ ಮೆರವಣಿಗೆಯು ಸಹ ಹಿರಿಯೂರು ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ಸಾಯಿಬಾಬಾನ ಭಕ್ತಾದಿಗಳಿಂದ ಅನ್ನಸಂತರ್ಪಣೆಯೂ ಸಹ ಬಹಳ ವಿಜೃಂಭಣೆಯಿಂದ ನಡೆಯಿತು.
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿದಂತಹ ಹಿರಿಯೂರು ನಗರಸಭೆ ಸದಸ್ಯರಾದ ಅಂಬಿಕಾ ಯಾನೆ ಅಂಬಿಕಾಬಾಯಿ , ವಿಶಾಲಾಕ್ಷಮ್ಮ , ಲೋಕೇಶ್ ಅವರು ಸೇರಿದಂತೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ, ರಾಯರ ವೈಶಿಷ್ಟ್ಯತೆಗಳ ಮಹಿಮೆಗಳು ಹಾಗೂ ತಮ್ಮ ಜೀವನದಲ್ಲಿ ನಡೆದ ಪವಾಡಗಳನ್ನು ವಿವರಿಸಿ, ಸ್ವಾಮಿಯ ಮಹಿಮೆಗೆ ಅಚ್ಚರಿ ವ್ಯಕ್ತಪಡಿಸಿದರು.
ರಾಯರ ದರ್ಶನಕ್ಕೆ ದಿನನಿತ್ಯ ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹಾಗಾಗಿ ದೇವಸ್ಥಾನದ ಅಭಿವೃದ್ಧಿಗೆ ಶಾಸಕರು ಹಾಗೂ ಸರ್ಕಾರ ಹೆಚ್ಚಿನ ಗಮನ ನೀಡಬೇಕಿದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಮಂಜುನಾಥ್ ಕುಟುಂಬಸ್ಥರು ಹಾಗೂ ದ್ವಿದಸ ಸಹಾಯಕರಾಗಿರುವ ಚನ್ನಬಸವರಾಜು ಕುಟುಂಬಸ್ಥರು ಸೇರಿದಂತೆ ಶ್ರೀನಿವಾಸ್ ಎಸ್. ಎನ್. , ಹಾಗೂ ಶಿವಕುಮಾರ್, ಲಕ್ಷ್ಮಿಕಾಂತ್ ,ಸೇರಿದಂತೆ ಅನೇಕ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್ ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


