ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರನ್ನು ಬಂಧಿಸಲಾಗಿದೆ. ವಿದೇಶಕ್ಕೆ ಮಾನವ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. ಅಕ್ರಮವಾಗಿ ವಿದೇಶಗಳಿಗೆ ಜನರನ್ನು ಕಳುಹಿಸಿದ ಆರೋಪ ಅವರ ಮೇಲಿದೆ. ಇದಕ್ಕೂ ಮೊದಲು ಪಟಿಯಾಲಾದ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಹಂದಿ ವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ದಂಡ ವಿಧಿಸಿ ಆದೇಶ ನೀಡಿತ್ತು. ಈ ಹಿನ್ನೆಲೆ ಗುರುವಾರ ಅವರನ್ನು ಬಂಧಿಸಲಾಗಿದೆ.
ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ನಡೆಯುತ್ತಿತ್ತು.
27 ಆಗಸ್ಟ್ 2003ರಲ್ಲಿ ನಮೂದಾದ ಎಫ್ಐಆರ್ ಸಂಖ್ಯೆ 498ರ IPS u/s 406,420,120B, 465,468,471 ಮತ್ತು ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯ ಅಡಿ ಈ ಪ್ರಕರಣ ನಮೂದಿಸಲಾಗಿತ್ತು, HS ಗ್ರೆವಾಲ್ ನ್ಯಾಯಾಲಯವು ಆರೋಪಿ ಗಾಯಕ ದಲೇರ್ ಮೆಹಂದಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿರುದ್ಧ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದಲೇರ್ ಮೆಹಂದಿ ಅವರಿಗೆ 16 ಮಾರ್ಚ್ 2018 ರಂದು ಜೆಎಂಐಸಿ ಪಟಿಯಾಲ 2 ವರ್ಷಗಳ ಶಿಕ್ಷೆ ವಿಧಿಸಿತ್ತು. ಇದೀಗ ಪಂಜಾಬ್‌ನ ಪಟಿಯಾಲ ಸೆಷನ್ಸ್ ನ್ಯಾಯಾಲಯವು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಅವರಿಗೆ ವಿಧಿಸಿದ್ದ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಈ ಮಾನವ ಕಳ್ಳಸಾಗಣೆ ಪ್ರಕರಣ ವರ್ಷ 2003ಕ್ಕೆ ಸಂಬಂಧಿಸಿದೆ. ಪ್ರಕರಣದಲ್ಲಿ ದಲೇರ್ ಮೆಹಂದಿ ಮತ್ತು ಅವರ ಸಹೋದರನ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿದ್ದವು.
ಏನಿದು ಪ್ರಕರಣ?
2003 ರಲ್ಲಿ ದಾಖಲಾದ ಪ್ರಕರಣದ ಪ್ರಕಾರ, ಮೆಹಂದಿ ಸಹೋದರರು 1998 ಮತ್ತು 1999 ರಲ್ಲಿ ಎರಡು ತಂಡಗಳನ್ನು ರಚಿಸಿದ್ದರು. ಈ ಸಂದರ್ಭದಲ್ಲಿ 10 ಮಂದಿಯನ್ನು ಗ್ರೂಪ್ ಸದಸ್ಯರನ್ನಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು ಮತ್ತು ನಂತರ ಅವರನ್ನು ಅಲ್ಲಿಯೇ ಅಕ್ರಮವಾಗಿ ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಮೆಹಂದಿ ಸಹೋದರರು ಅಪಾರ ಹಣವನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy