ಸರಗೂರು: ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಬಾಬು ಜಗಜೀವನರಾಂ ವಿಚಾರ ವೇದಿಕೆ ನೂತನ ಅಧ್ಯಕ್ಷರಾಗಿ ಕೊತ್ತೇಗಾಲ ತಿಮ್ಮಯ್ಯರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹೆಚ್.ಡಿ.ಕೋಟೆ ತಾಲ್ಲೂಕಿನ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಮುಖಂಡರ ಸಮ್ಮುಖದಲ್ಲಿ ಬಾಬು ಜಗಜೀವನರಾಂ ವಿಚಾರ ವೇದಿಕೆ ನೂತನ ಅಧ್ಯಕ್ಷರಾಗಿ ಕೊತ್ತೇಗಾಲ ತಿಮ್ಮಯ್ಯ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಕೊತ್ತೆಗಾಲ ತಿಮ್ಮಯ್ಯ ಮಾತನಾಡಿ, ಹೆಚ್. ಡಿ.ಕೋಟೆ ಮತ್ತು ಸರಗೂರು ಎರಡು ತಾಲ್ಲೂಕಿನ ನಮ್ಮ ಜನಾಂಗದ ಸಮುದಾಯ ಭವನಗಳನ್ನು ಹಾಗೂ ಜನಾಂಗದ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತೇನೆ ಎಂದರು.
ಸಭೆಯಲ್ಲಿ ಮುಖಂಡರಾದ ಶಿವಯ್ಯ, ಪ್ರಕಾಶ್ ಹೀರಹಳ್ಳಿ, ಸೋಮುಪಾಟಿಲ್, ಗ್ರಾ.ಪಂ . ಸದಸ್ಯರಾದ ಮಹಾದೇವ, ನಾಗರಾಜು, ಚಲುವರಾಜು, ಬೆಟ್ಟಸ್ವಾಮಿ, ಕಾರ್ಯದರ್ಶಿಮಹೇಶ್, ಮಂಜುನಾಥ, ಜಯಕುಮಾರ್, ದೇವರಾಜು, ಸ್ವಾಮಿ, ಗೊವಿಂದರಾಜು, ಕರಿಯಯ್ಯ, ಮಹದೆವಯ್ಯ, ಕೆ.ಟಿ.ಸ್ವಾಮಿ, ಎಡತ್ತೊರೆ ಶಿವರಾಜು, ಮುಳ್ಳೂರು ಸಿದ್ದಪ್ಪ, ಶಿಶರಾಜು, ಶ್ರೀನಿವಾಸ, ರಾಜಣ್ಣ ಇನ್ನೂ ಮುಖಂಡರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy