ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಸರ್ಕಾರದ ಆದೇಶ ಆಧಾರಿಸಿ ಹೈಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೆ ಮುಸ್ಲಿಂ ಸಮುದಾಯದವರು ತಮ್ಮದೆಯಾದ ಕಾಲೇಜು ಪ್ರಾರಂಭಿಸಲು ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಒಂದರಲ್ಲೇ ಕಾಲೇಜು ಸ್ಥಾಪನೆಗೆ ಪಿಯುಸಿ ಮಂಡಳಿಗೆ ೧೪ ಅರ್ಜಿಗಳು ಬಂದಿದ್ದು, ಈ ಅರ್ಜಿಗಳ ಪೈಕಿ ೧೩ ಅರ್ಜಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳಿಗೆ ಸೇರಿರುವುದು ವಿಶೇಷ.ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಕಾಲೇಜುಗಳಿಗೆ ಬರುವಂತಿಲ್ಲ ಎಂಬ ಆದೇಶಕ್ಕೆ ಸಡ್ಡು ಹೊಡೆಯಲು ಮುಸ್ಲಿಂ ಸಮುದಾಯದವರು ತಮ್ಮದೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಯು ಕಾಲೇಜು ಆರಂಭಿಸಲು ಅನುಮತಿ ಕೋರಿ ಸಲ್ಲಿಸಲಾಗಿರುವ ೧೪ ಅರ್ಜಿಗಳ ಪೈಕಿ ೨ ಅರ್ಜಿಗಳನ್ನು ಪಿಯು ಮಂಡಳಿ ವಿಲೇವಾರಿ ಮಾಡಿ ಕಾಲೇಜು ತೆರೆಯಲು ಅನುಮತಿ ನೀಡಿದೆ.ಅನುಮತಿ ನೀಡಿರುವ ಒಂದು ಪಿಯು ಕಾಲೇಜು ಗುರುಪುರದ ಮುಸ್ಲಿಂ ಶಿಕ್ಷಣ ಸಂಸ್ಥೆಗೆ ಸೇರಿದರೆ, ಮತ್ತೊಂದು ಸುಬ್ರಮಣ್ಯದ ಮುಸ್ಲಿಮೇತರ ಶಿಕ್ಷಣ ಸಂಸ್ಥೆಗೆ ಸೇರಿದ್ದಾಗಿದೆ.ಜಿಲ್ಲೆಯಲ್ಲಿ ಉಳಿದ ೧೨ ಮುಸ್ಲಿಂ ಆಡಳಿತದ ಕಾಲೇಜು ಸ್ಥಾಪನೆಯ ಆರ್ಜಿಗಳು ಅನುಮತಿಗಾಗಿ ಬಾಕಿ ಉಳಿದಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy