ಹರ್ಯಾಣ: ಮೊಬೈಲ್ ಚಾರ್ಜ್ ಮಾಡಿ ಜೇಬಿನಲ್ಲಿ ಹಾಕಿದ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಂಡ ಘಟನೆ ಹರ್ಯಾಣದಲ್ಲಿ ನಡೆದಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಾಗಿದೆ.
ಸ್ಫೋಟಗೊಂಡ ಮೊಬೈಲನ್ನು ಯುವಕ ಬಹಳ ಸಮಯದಿಂದ ಬಳಸುತ್ತಿದ್ದರು ಎನ್ನಲಾಗಿದೆ. ಬುಧವಾರ ಫೋನ್ ನ ಬ್ಯಾಟರಿ ಖಾಲಿಯಾದ ಕಾರಣ ಮೊಬೈಲ್ ಚಾರ್ಜಿಂಗ್ ಗೆ ಹಾಕಿದ್ದರು. ಚಾರ್ಜ್ ಮಾಡಿದ ನಂತರ, ಸ್ವಲ್ಪ ಹೊತ್ತು ಬಳಸಿ, ಪ್ಯಾಂಟ್ನ ಜೇಬಿಗೆ ಹಾಕಿಕೊಂಡಿದ್ದು, ಈ ವೇಳೆ ಮೊಬೈಲ್ ಏಕಾಏಕಿ ಸ್ಫೋಟಗೊಂಡಿದೆ.
ಫೋನ್ ಬ್ಲಾಸ್ಟ್ ಆದ ಪರಿಣಾಮ ಯುವಕನ ಕಾಲಿಗೆ ತೀವ್ರವಾದ ಸುಟ್ಟಗಾಯಗಳಾಗಿವೆ. ಸದ್ಯ ಯುವಕನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಬಳಿಕ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz