ನೊಬೆಲ್ ಪ್ರಶಸ್ತಿ ವಿಜೇತ, ಪ್ರಸಿದ್ದ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಅವರಿಗೆ ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಬಂಗಾಬಿಭೂಷಣ’ ಘೋಷಣೆ ಮಾಡಲಾಗಿದೆ.
ಆದರೆ ವಿವಿಧ ಕಾರಣಗಳಿಂದಾಗಿ ಪ್ರಶಸ್ತಿ ಸ್ವೀಕರಿಸದಿರಲು ಅಮಾರ್ತ್ಯ ಸೇನೆ ನಿರ್ಧರಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸದ್ಯ ಕುಟುಂಬದ ಸದಸ್ಯರ ಜೊತೆ ಯೂರೋಪ್‌ನಲ್ಲಿ ಅಮಾರ್ತ್ಯ ಸೇನ್ ಇದ್ದಾರೆ ಎಂದು ಮೂಲಗಳು ತಿಳಿಸಿದ್ದು ಬಂಗಾಳ ಸರ್ಕಾರದ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಹಲವು ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಡುವ ಅದೃಷ್ಟವನ್ನು ಹೊಂದಿದ್ದು. ‘ಬಂಗಾಬಿಭೂಷಣ’ ಪ್ರಶಸ್ತಿಯನ್ನು ಇತರರಿಗೆ ನೀಡಬೇಕೆಂದು ತಮದೆ ಬಯಸಿದ್ದಾರೆ ಎಂದು ಅಮಾರ್ತ್ಯ ಸೇನ್ ಅವರ ಪುತ್ರಿ ಅಂತರಾ ದೇವ್ ಸೇನ್ ತಿಳಿಸಿದ್ದಾರೆ.
ಪ್ರಶಸ್ತಿ ಸ್ವೀಕಾರ ಮಾಡಬೇಕು ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಮನವಿ ಮಾಡಿದ ಸಂದರ್ಭದಲ್ಲಿ ತಾವು ಭಾರತದಲ್ಲಿ ಇರುವುದಿಲ್ಲ ಎಂದು ಸೇನ್ ಹೇಳಿದ್ದರು. ಇಂದು ಕೋಲ್ಕತ್ತಾದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಬಂಧನದ ಹಿನ್ನೆಲೆಯಲ್ಲಿ ಟಿಎಂಸಿ ಸರ್ಕಾರ ನೀಡಿರುವ ಪ್ರಶಸ್ತಿ ಸ್ವೀಕರಿಸದಂತೆ ಸಿಪಿಐ(ಎಂ) ನಾಯಕ ಸುಜನ್ ಚಕ್ರವರ್ತಿ ಅವರು ಸೇನ್ ಅವರಿಗೆ ಮನವಿ ಮಾಡಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz