ಕೊಪ್ಪಳ: ಗಂಗಾವತಿ ತಾಲೂಕಿನ ಕಿಷ್ಕಿಂಧೆ ಭಾಗದ ಅಂಜನಾದ್ರಿ ಬೆಟ್ಟವೇ ಹನುಮಂತ ಹುಟ್ಟಿದ ಸ್ಥಳ. ಇದಕ್ಕೆ ರಾಮಾಯಣದಲ್ಲಿನ ಉಲ್ಲೇಖಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ದೇಶದಲ್ಲಿ ಸುಖಾ ಸುಮ್ಮನೇ ಆಂಜನೇಯನ ಜನ್ಮಸ್ಥಳದ ಕುರಿತು ವಿವಾದ ಸೃಷ್ಟಿಸಲಾಗುತ್ತಿದೆ. ಬೇರೆಯವರ ವಾದದಲ್ಲಿ ಹುರುಳಿಲ್ಲ. ಅವರ ವಾದಕ್ಕೆ ಪುರಾವೆಗಳಿಲ್ಲ. ನಮ್ಮಲ್ಲಿ ಅನೇಕ ಪುರಾವೆಗಳಿವೆ. ರಾಮಾಯಣದ ಕಿಷ್ಕಿಂಧ ಕಾಂಡದಲ್ಲಿ ಬರುವ ಬೆಟ್ಟದಲ್ಲಿ ಆಂಜನೇಯನ ಜನನವಾಯಿತೆಂದು ಸ್ಪಷ್ಟವಾಗಿದೆ ಎಂದು ವಾದ ಮಂಡಿಸಿದರು.
ಬೆಟ್ಟಕ್ಕೆ ಸಾಕಷ್ಟು ಜನ ಯಾತ್ರಿಕರು ಬರುತ್ತಾರೆ. ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು. ಪ್ರಸಾದ ನಿಲಯ, ಯಾತ್ರಿ ನಿವಾಸ, ಪಾರ್ಕಿಂಗ್ ಆಸ್ಪತ್ರೆ ಸೇರಿ ಇತರ ಕಾಮಗಾರಿ ನಡೆಸಲಾಗುವುದು. ಎರಡನೇ ಹಂತದಲ್ಲಿ ರೋಪ್ ವೇ ಮಾಡಲಾಗುವುದು. ಹಂಪಿ, ಮೈಸೂರು ಟೂರಿಸಂ ಸರ್ಕಿಟ್ ಮಾಡಲಾಗುತ್ತಿದೆ. ಅದರಲ್ಲಿ ಹಂಪಿ ಅಕ್ಕಪಕ್ಕದ ಪಾರಂಪರಿಕ ತಾಣಗಳನ್ನು ಒಳಗೊಂಡು ಅಂತಾರಾಷ್ಟ್ರೀಯ ಟೂರಿಸಂ ಸರ್ಕೀಟ್ ಮಾಡಲಾಗುವುದೆಂದು ತಿಳಿಸಿದರು.
ಪ್ರವೀಣ್ ಹತ್ಯೆಯಿಂದ ಸಹಜವಾಗಿ ಹಿಂದು ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಹಂತಕರಿಗೆ ಶಿಕ್ಷೆ ವಿಧಿಸಲಾಗುವುದು. ಕಾರ್ಯಕರ್ತರ ಮನವೊಲಿಸಲಾಗುವುದು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


