ತುಮಕೂರು: ಜಿಲ್ಲೆ ತುರುವೇಕೆರೆ ತಾಲೂಕಿನ ಹೋಬಳಿ ಅರೆ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ವಸತಿ ಶಿಕ್ಷಣ ಸಂಸ್ಥೆಗಳ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 2022 23ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕರ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಪೋಷಕರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಶಾಲೆಯ ಪ್ರಾಂಶುಪಾಲರಾದ ಪರಣ್ಣರವರು ಸಭೆಯಲ್ಲಿ ಹಾಜರಿದ್ದ ಮಕ್ಕಳ ಪೋಷಕರುಗಳಿಗೆ ಈ ಸಭೆಯನ್ನು ಕರೆದಿರುವ ಉದ್ದೇಶ ಹಾಗೂ ಮಕ್ಕಳಿಗೆ ಕೊಡ ಬೇಕಾದ ಊಟ ಉಪಚಾರ ನಮ್ಮ ಕಡೆಯಿಂದ ಮಕ್ಕಳಿಗೆ ಆಗಬೇಕಾದ ಅನುಕೂಲಗಳು ಪಾಠ ಪ್ರವಚನದ ಬಗ್ಗೆ ಕುಲಂಕುಶವಾಗಿ ತಿಳಿಸಿಕೊಟ್ಟರು.
ಈ ಸಭೆಯಲ್ಲಿ ಶಿಕ್ಷಕರುಗಳಾದ ಡಿ ಪಿ ವೇಣುಗೋಪಾಲ್, ವಿನೋದ್ ಕುಮಾರ್, ಹರ್ಷವರ್ಧನ್, ಮಂಜುನಾಥ್, ರವಿಕಿರಣ್, ರಾಘವೇಂದ್ರ ಶಿಕ್ಷಕಿಯರುಗಳಾದ ಶಿಲ್ಪಾ ಶ್ರೀ, ಸಬಿ ಹಾಬಾನು, ಆಶಾ , ಶ್ಯಾಮ್ ಸುಂದರ್ ಮತ್ತಿತರರು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy