ಕಲ್ಪತರು ವಿದ್ಯಾ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿಗೆ ಎನ್ ಬಿಎ ಸಿಗುವ ಮೂಲಕ ಗ್ರಾಮೀಣ ಪ್ರದೇಶದ ಸಂಸ್ಥೆಯು ಗುರುತಿಸಿಕೊಳ್ಳುವಂತಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೆ ರುದ್ರಪ್ಪ ಸಂತಸ ವ್ಯಕ್ತಪಡಿಸಿದರು.
ಕಲ್ಪತರು ಇಂಜಿನಿಯರಿಂಗ್ ಕಾಲೇಜ್ ಆಡಳಿತ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಕಾಲೇಜಿಗೆ ಭೇಟಿ ನೀಡಿ ನವದೆಹಲಿ ನ್ಯಾಷನಲ್ ಬೋರ್ಡ್ ಆಫ್ ಆ ಕ್ರೆಡಿಟೇಶನ್ ಎನ್ ಬಿಎ ತಂಡಗಳು ಕಾಲೇಜಿನ ಕೊಠಡಿಗಳು , ಅಲ್ಲಿನ ವಿನ್ಯಾಸ ಲೈಬ್ರೆರಿ ವ್ಯವಸ್ಥೆ, ಬೋಧನಾ ಸಿಬ್ಬಂದಿಯ ಹಾಜರಾತಿ ಮಾಹಿತಿ ಸಂಗ್ರಹಿಸಿ ಎನ್ ಬಿಎ ಮಾನ್ಯತೆಗೆ ಶಿಫಾರಸ್ಸು ಮಾಡಿದ್ದು, ಈ ಮೂಲಕ ವಿಶ್ವ ದರ್ಜೆಯ ಗುಣಮಟ್ಟದ ಶಿಕ್ಷಣಕ್ಕೆ ಈ ಕಾಲೇಜು ಮಾನ್ಯತೆ ಪಡೆದಿದೆ .
ಖಾಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ, ನಮ್ಮ ಸಂಸ್ಥೆ ಕಡಿಮೆ ಶುಲ್ಕ ವಸೂಲಿ ಮಾಡುತ್ತಿದೆ . ಇದರಿಂದಲೇ ನಮ್ಮ ಕಾಲೇಜಿಗೆ ಮಾನ್ಯತೆ ಸಿಕ್ಕಿದೆ. ಸದ್ಯಕ್ಕೆ ಎರಡು ವಿಭಾಗಕ್ಕೆ ಮಾನ್ಯತೆ ಬಂದಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಸುಧಾಕರ್, ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್ ಟಿ.ಎಸ್., ಬಸವರಾಜ್ ಜಿ.ಕೆ. ದೀಪಕ್, ಜಗದೀಶ್ ಮೂರ್ತಿ , ಸುಧಾಕರ್, ಗುರುಮೂರ್ತಿ ಹಾಜರಿದ್ದರು
ವರದಿ: ಆನಂದ್ ತಿಪಟೂರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz