ಪಾಟ್ನಾ: ಇಡಿ ಅಧಿಕಾರಿಗಳು ತಮ್ಮ ಮನೆಗೆ ಬಂದು ಕಚೇರಿ ತೆರೆಯಬಹುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಬಿಹಾರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರೀಯ ಮಾಧ್ಯಮ ಚಾನೆಲ್ ಎನ್ ಡಿಟಿವಿಗೆ ವಿಶೇಷ ಸಂದರ್ಶನ ನೀಡಿದರು.
‘ನಿಮ್ಮ ಚಾನೆಲ್ (ಎನ್‌ಡಿಟಿವಿ) ಮೂಲಕ ನಾನು ಇಡಿ, ಆದಾಯ ತೆರಿಗೆ ಇಲಾಖೆ, ಸಿಬಿಐಗೆ ಆಹ್ವಾನ ನೀಡುತ್ತಿದ್ದೇನೆ. ಅವರು ನನ್ನ ಮನೆಯಲ್ಲಿ ಕಚೇರಿಗಳನ್ನು ತೆರೆಯಬಹುದು . ಇಡಿ, ಸಿಬಿಐ ಬಿಜೆಪಿ ಪಕ್ಷದ ಸೆಲ್‌ನಂತೆ ಕೆಲಸ ಮಾಡುತ್ತಿವೆ ಎಂದರು.
ನಿತೀಶ್ ಜೊತೆ ಕೈಜೋಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೂರ್ವ ಯೋಜನೆಯ ಭಾಗವಾಗಿ ಭೇಟಿಯಾಗಲಿಲ್ಲ, ಆದರೆ ಅದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಹೇಳಿದರು.
ನಿತೀಶ್ ಅವರು ಬಿಜೆಪಿಯೊಂದಿಗೆ ಇರುವವರೆಗೂ ಅನಾನುಕೂಲವಾಗಿದ್ದಾರೆ ಎನ್ನಲಾಗಿದೆ. 2024ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್ ಸ್ಪರ್ಧಿಸಬಹುದೇ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ. ‘ಮೋದಿ ಪ್ರಧಾನಿಯಾದಾಗ.. ನಿತೀಶ್ ಏಕೆ ಆಗಬಾರದು?’ ಎಂದರು.
ಬಿಜೆಪಿಯನ್ನು ಕಿತ್ತೊಗೆಯಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಈ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ಧಪಡಿಸಬೇಕು. ಈಗಾಗಲೇ ವಿಳಂಬವಾಗಿದೆ ಎಂದು ಹೇಳಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz