ವಿಮಾನದಲ್ಲಿ ವ್ಯಕ್ತಿಯೊಬ್ಬ ಧೂಮಪಾನ ಮಾಡುತ್ತಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿರುವ ಜೊತೆ ಭದ್ರತೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಉತ್ತರಖಂಡ್ ನ ಶಾಸಕ ಉಮೇಶ್ ಕುಮಾರ್ ಅವರು ತಮ್ಮ ಟ್ವೀಟರ್‍ನಲ್ಲಿ ಹಂಚಿಕೊಂಡಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿಮಾನದ ಸೀಟಿನಲ್ಲಿ ಅಡಗಿಕೊಳ್ಳುವಂತೆ ಮಲಗಿ ಕಾಲ ಮೇಲೆ ಕಾಲು ಹಾಕಿದ್ದು, ಲೈಟರ್‍ನಿಂದ ಸಿಗರೇಟ್ ಅಂಟಿಸಿ ಧೂಮಪಾನ ಮಾಡಿದ್ದಾನೆ. ಅದೇ ವಿಮಾನದ ಮುಂಭಾಗ ಸೀಟ್‍ಗಳಲ್ಲಿ ಪ್ರಯಾಣಿಕರು ಕುಳಿತಿರುವು ಕಂಡುಬಂದಿದೆ. ಆತ ಸಿಗರೇಟ್ ಸೇದುವುದನ್ನು ಮತ್ತೊಬ್ಬ ವ್ಯಕ್ತಿ ವಿಡಿಯೋ ಮಾಡಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಬಿಗಿಭದ್ರತೆ ಇರಲಿದ್ದು, ಬೆಂಕಿಗೆ ಕಾರಣವಾಗಿರುವ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಹಾಗಿದ್ದು ವಿವಾದಿತ ವ್ಯಕ್ತಿ ಸಿಗರೇಟ್ ಮತ್ತು ಲೈಟರ್‍ನ್ನು ತೆಗೆದುಕೊಂಡು ಹೋಗಿದ್ದು ಹೇಗೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ಭಯೋತ್ಪಾದನೆಯ ದಾಳಿ, ಬೆದರಿಕೆಗಳ ನಡುವೆ ಈ ರೀತಿಯ ಭದ್ರತೆಯ ವೈಫಲ್ಯಗಳು ಆತಂಕ ಮೂಡಿಸಿವೆ. ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz