ಮುಂಬೈ: ಸಾಲ ವಸೂಲಿ ವೇಳೆ ರಿಕವರಿ ಏಜೆಂಟರು ಗ್ರಾಹಕರಿಗೆ ಬೆದರಿಕೆ ಹಾಕುವುದು ಮತ್ತು ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ನಂತರ ಪೋನ್ ಮಾಡುವಂತಿಲ್ಲವೆಂದು ಆರ್‌ಬಿಐ ಹೊಸ ಸುತ್ತೋಲೆ ಬಿಡುಗಡೆ ಹೊರಡಿಸಿದ್ದು, ಖಡಕ್ ಎಚ್ಚರಿಕೆ ನೀಡಿದೆ.
ಬ್ಯಾಂಕ್ ಗಳು, ಎನ್‌ಬಿಎಫ್‌ಸಿಗಳು ಮತ್ತು ಎಆರ್‌ಸಿಗಳು ಸೇರಿದಂತೆ ನಿಯಂತ್ರಿತ ಘಟಕಗಳಿಗೆ ಹೆಚ್ಚುವರಿ ಸೂಚನೆ ನೀಡುವಾಗ ರಿಸರ್ವ್ ಬ್ಯಾಂಕ್ (RBI) ಸಾಲ ವಸೂಲಾತಿಗೆ ಸಂಬಂಧಿಸಿದಂತೆ ವಸೂಲಾತಿ ಏಜೆಂಟ್‌ಗಳು ತನ್ನ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದೆ. ಈ ಹಿಂದೆಯೇ ಹೊರಡಿಸಲಾಗಿರುವ ನಿಯಮಗಳನ್ನು ಸಂಸ್ಥೆಗಳು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಸಾಲ ವಸೂಲಿ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಪ್ರತಿನಿಧಿಗಳು ಬಲಪ್ರಯೋಗ, ಕಿರುಕುಳ ನೀಡುವಂಥ ಕ್ರಮಗಳನ್ನು ಅನುಸರಿಸುವಂತೆ ಇಲ್ಲ. ಅನಪೇಕ್ಷಿತ ಸಂದೇಶಗಳನ್ನು, ಅನಾಮಧೇಯರ ಹೆಸರಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ಬಳಿಕ ಫೋನ್ ಮಾಡುವಂತಿಲ್ಲವೆಂದು ತನ್ನ ಸುತ್ತೋಲೆಯಲ್ಲಿ ಆರ್‌ಬಿಐ ಸೂಚಿಸಿದೆ.
ಆರ್‌ಬಿಐ ಫೇರ್ ಪ್ರಾಕ್ಟೀಸಸ್ ಕೋಡ್ (FPC)ಯ ಭಾಗವಾಗಿ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಲ ವಸೂಲಾತಿ ವೇಳೆ ಫೋನ್‌ನಲ್ಲಿ ಕರೆ ಮಾಡಿ ತಮ್ಮ ಸಾಲಗಾರರಿಗೆ ಬೆದರಿಕೆ ಅಥವಾ ಕಿರುಕುಳ ನೀಡಬಾರದು ಎಂದು ಈಗಾಗಲೇ ಆರ್‌ಇಗಳಿಗೆ ಸಲಹೆ ನೀಡಿದೆ.
ಆರ್‌ಇಗಳಿಗೆ ಈ ಹೆಚ್ಚುವರಿ ಸೂಚನೆಗಳನ್ನು ನೀಡಲು ಆರ್‌ಎಗಳು (ರಿಕವರಿ ಏಜೆಂಟ್‌ಗಳು) ಅನುಸರಿಸುತ್ತಿರುವ ಸ್ವೀಕಾರಾರ್ಹವಲ್ಲದ ಅಭ್ಯಾಸಗಳ ಬೆಳವಣಿಗೆಯ ಘಟನೆಗಳು ಸೇರಿದಂತೆ ಕೆಲವು ಇತ್ತೀಚಿನ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡಿದೆ ಎಂದು ಬ್ಯಾಂಕಿಂಗ್ RBI ಹೇಳಿದೆ.
ಗ್ರಾಹಕರ ಜೊತೆಗೆ ರಿಕವರಿ ಏಜೆಂಟರು ಸರಿಯಾಗಿ ನಡೆದುಕೊಳ್ಳಬೇಕು. ಯಾವುದೇ ಗ್ರಾಹಕರ ಜೊತೆಗೆ ಅನುಚಿತ ವರ್ತನೆ ತೋರುವುದು ಸರಿಯಲ್ಲ. ಸರಿಯಾದ ರೀತಿಯಲ್ಲಿ ಸಾಲ ವಸೂಲಾತಿ ಮಾಡಬೇಕು. ನಿಂದಿಸುವುದು ಅಥವಾ ಮಾನಸಿಕ-ದೈಹಿಕ ಕಿರುಕುಳ ನೀಡುವುದು ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೂಗೊಳ್ಳಬೇಕಾಗುತ್ತದೆ ಎಂದು ಕಠಿಣ ಸಂದೇಶ ರವಾನಿಸಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy