ಇಂದು ದೇಶದ ಹಲವು ರಾಜ್ಯಗಳಲ್ಲಿ ಭಾತೃತ್ವದ ಸಂಕೇತವಾಗಿರುವ ರಕ್ಷಾಬಂಧನ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟಿದ್ದಾರೆ. ಇಂತಹುದರಲ್ಲಿ ರಾಜಸ್ಥಾನದ ರಾಜಸಮಂಜ್ ಜಿಲ್ಲೆಯಿಂದ ಒಂದು ವಿಶಿಷ್ಟ ಸುದ್ದಿಯೊಂದು ಹೊರಹೊಮ್ಮಿದೆ. ವಾಸ್ತವದಲ್ಲಿ ಅಲ್ಲಿನ ಓರ್ವ ಮಹಿಳೆಯು ಒಂದು ಚಿರತೆಯ ಕೈಗೆ ರಾಖಿಯನ್ನು ಕಟ್ಟಿ ರಕ್ಷಾಬಂಧನ ಉತ್ಸವವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದ್ದಾರೆ. ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ರಾಖಿ ಕಟ್ಟುವ ಸಂದರ್ಭದಲ್ಲಿ ಚಿರತೆ ಮಹಿಳೆಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಿಲ್ಲ ಎಂಬುದು ಇಲ್ಲಿ ತುಂಬಾ ವಿಶೇಷವಾಗಿದೆ.
ಚಿರತೆಗೆ ರಾಖಿ ಕಟ್ಟಿದ ಮಹಿಳೆ
ರಾಜಸಮಂಜ್ ಜಿಲ್ಲೆಯ ಖೇಡಾ ಗ್ರಾಮದ ನಿವಾಸಿಯಾಗಿರುವ ಲೀಲಾ ಹೆಸರಿನ ಮಹಿಳೆ ತನ್ನ ಪತಿಯೊಂದಿಗೆ ತವರು ಮನೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಗಾಯಗೊಂಡ ಒಂದು ಚಿರತೆ ರಸ್ತೆಯ ಪಕ್ಕದಿಂದ ಸಾಗುತ್ತಿರುವುದನ್ನು ಆಕೆ ಗಮನಿಸಿದ್ದಾಳೆ. ಆಗ ವಾಹನವನ್ನು ನಿಲ್ಲಿಸಲು ಹೇಳಿದ ಮಹಿಳೆ ಚಿರತೆಯ ಮುಂದಿನ ಕೈಗೆ ರಾಖಿಯನ್ನು ಕಟ್ಟಿದ್ದಾಳೆ. ಈ ಘಟನೆಯ ವಿಡಿಯೋವನ್ನು ಕೂಡ ಚಿತ್ರೀಕರಿಸಲಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
ವಾಸ್ತವದಲ್ಲಿ ವಿಡಿಯೋದಲ್ಲಿರುವ ಹೆಣ್ಣು ಚಿರತೆ ಗಾಯಗೊಂಡಿತ್ತು ಮತ್ತು ಅದು ಪಟ್ಟಣಕ್ಕೆ ಬಂದಿತ್ತು. ಮಹಿಳೆ ಚಿರತೆಗೆ ರಾಖಿ ಕಟ್ಟಿದ ಬಳಿಕ, ಅದರ ಸೂಚನೆಯನ್ನು ಕೆಲ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದಾರೆ. ಬಳಿಕ ವೈದ್ಯಾಧಿಕಾರಿಗಳೊಂದಿಗೆ ಘಟನಾಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚಿರತೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಿರತೆ ಅಸು ನೀಗಿದೆ.
ಜಿಲ್ಲೆಯಲ್ಲಿ ಹಲವು ಚಿರತೆಗಳಿವೆ
ರಾಜಸ್ಥಾನದ ರಾಜಸಮಂಜ್ ಜಿಲ್ಲೆಯ ದಟ್ಟ ಕಾಡುಗಳಲ್ಲಿ ಹಲವು ಚಿರತೆಗಳಿವೆ. ಗಡಿಭಾಗದಲ್ಲಿ ಆಗಾಗ್ಗ ನಡೆಯುವ ಕೆಲ ಘರ್ಷಣೆಗಳಿಂದ ಚಿರತೆಗಳು ಗಾಯಗೊಳ್ಳುತ್ತವೆ. ನಂತರ ದಾರಿತಪ್ಪಿ ಅವು ಜನ ವಸತಿ ಪ್ರದೇಶಗಳಿಗೆ ಬರುತ್ತವೆ. ಮತ್ತೊಂದೆಡೆ ಬೇಟೆಗಾರರು ಇವುಗಳನ್ನು ಬೇಟೆಯಾಡುವಾಗ ಚಿರತೆಗಳು ಗಾಯಗೊಳ್ಳುತ್ತವೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy