ನವದೆಹಲಿ: ಭಾರತೀಯ ಬಿಲಿಯನೇರ್ ಉದ್ಯಮಿ, ಹೂಡಿಕೆದಾರ ‘ಬಿಗ್ ಬುಲ್’ ಖ್ಯಾತಿಯ ರಾಕೇಶ್ ಜುಂಜುನ್ವಾಲಾ ಅವರು 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಜುಲೈ 5, 1960ರಂದು ಜನಿಸಿದ ಜುಂಜುನ್ವಾಲಾ ಬಾಂಬೆಯಲ್ಲಿ ರಾಜಸ್ಥಾನಿ ಕುಟುಂಬದಲ್ಲಿ ಬೆಳೆದರು. ಅವರ ತಂದೆ ಆದಾಯ ತೆರಿಗೆ ಆಯುಕ್ತರಾಗಿದ್ದರು. ರಾಕೇಶ್ ಅವರು ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದುಕೊಂಡಿದ್ದರು. ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಗೆ ಸೇರಿಕೊಂಡರು. ರಾಕೇಶ್ ಜುಂಜುನ್ವಾಲಾ ಅಂದಾಜು $5.5 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದುವ(ಜುಲೈ 2022ರಂತೆ) ಮೂಲಕ ಭಾರತದ 36ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಸಕ್ರಿಯ ಹೂಡಿಕೆದಾರರಲ್ಲದೆ ಜುಂಜುನ್‌ವಾಲಾ ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ನ ಅಧ್ಯಕ್ಷರಾಗಿದ್ದರು. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೋಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಲಿಮಿಟೆಡ್, ನಾಗಾರ್ಜುನಮಿಟ್ ಕಂಪನಿ ಲಿಮಿಟೆಡ್, ವಿಸರ್ಜನಾ ಫೋಕಸ್ ಲಿಮಿಟೆಡ್ & ಟಾಪ್ಸ್ ಸೆಕ್ಯುರಿಟಿ ಲಿಮಿಟೆಡ್ ಅವರ ನಿರ್ದೇಶಕರ ಮಂಡಳಿಯಲ್ಲಿದೆ.
ರಾಕೇಶ್ ಜುಂಜುನ್‍ವಾಲಾ ‘ಬಿಗ್ ಬುಲ್ ಆಫ್ ಇಂಡಿಯಾ’ ಮತ್ತು ‘ಕಿಂಗ್ ಆಫ್ ಬುಲ್ ಮಾರ್ಕೆಟ್’ ಎಂದೇ ಖ್ಯಾತಿ ಗಳಿಸಿದ್ದರು. ತಮ್ಮ ಷೇರು ಮಾರುಕಟ್ಟೆ ಮುನ್ಸೂಚನೆಗಳು ಮತ್ತು ಬುಲಿಶ್ ದೃಷ್ಟಿಕೋನಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರನ್ನು ಭಾರತದ ವಾರೆನ್ ಬಫೆಟ್ ಎಂತಲೂ ಕರೆಯಲಾಗುತ್ತದೆ.
ಇತ್ತೀಚೆಗಷ್ಟೇ ರಾಕೇಶ್ ಜುಂಜುನ್‌ವಾಲಾ ಮತ್ತು ಮಾಜಿ ಜೆಟ್ ಏರ್‌ವೇಸ್ ಸಿಇಒ ವಿನಯ್ ದುಬೆ ಸೇರಿ ‘ಆಕಾಶ್ ಏರ್’ ಭಾರತೀಯ ವಿಮಾನಯಾನ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಈ ಏರ್‌ಲೈನ್ ಪ್ರಸ್ತುತ 2 ವಿಮಾನಗಳನ್ನು ಹೊಂದಿದ್ದು, 70ಕ್ಕೂ ಹೆಚ್ಚಿನ ವಿಮಾನಗಳನ್ನು ಸೇರಿಸುವ ಮಹಾತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಇದೇ ಆಗಸ್ಟ್ 9ರಿಂದ ಭಾರತದ 3 ನಗರಗಳ ನಡುವೆ ‘ಆಕಾಶ್ ಏರ್’ ಕಾರ್ಯಾರಂಭ ಮಾಡಿತ್ತು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy