ತಿಪಟೂರು: ಕಲ್ಪತರು ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಿಸಲಾಯಿತು.ತಿಪಟೂರು ಉಪವಿಭಾಗಾಧಿಕಾರಿ ಕಲ್ಪಶ್ರೀ ಧ್ವಜಾರೋಹಣ ನೆರವೇರಿಸಿ ಪೋಲಿಸ್ ತುಕಡಿ, ಗೃಹರಕ್ಷಕದಳ ಎನ್.ಸಿ.ಸಿ ತುಕ್ಕಡಿ , ಸ್ಕೌಟ್ಸ್ ತುಕ್ಕಡಿ ಸೇರಿದಂತೆ ವಿವಿಧ ಶಾಲಾ ತಂಡಗಳಿಂದ ಧ್ವಜವಂದನೆ ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಅವರು, ದೇಶದ ಲಕ್ಷಾಂತರ ಜನರಲ್ಲಿ ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಳುವಳಿ, ದಂಡಿಯಾತ್ರೆ, ಅಸಹಕಾರ ಚಳುವಳಿ , ಕ್ವಿಟ್ ಇಂಡಿಯಾ ಸತ್ಯಾಗ್ರಹದಂತಹ ಸಾವಿರಾರು ಹೋರಾಟಗಳು ಬ್ರಿಟಿಷ್ ಸರ್ವಾಧಿಕಾರಿ ಆಡಳಿತವನ್ನು 1947 ರ ಆಗಸ್ಟ್ 15 ರಂದು ಕೊನೆಗಾಣಿಸಿತು. ಲಕ್ಷಾಂತರ ಜನ ಧೀಮಂತ ನಾಯಕರು ತ್ಯಾಗ ಬಲಿದಾನದ ಮೂಲಕ ಅಪರಿಮಿತ ಶ್ರಮದ ಮೂಲಕ ಈ ಸುದಿನವನ್ನು ನಮ್ಮ ಪಾಲಿಗೆ ಬಿಟ್ಟುಹೋಗಿದ್ದಾರೆ . ಸ್ವಾಮಿ ವಿವೇಕಾನಂದರು ‘ ಏಳಿ , ಎದ್ದೇಳಿ , ಗುರಿ ಮುಟ್ಟುವ ತನಕ ನಿಲ್ಲದಿರಿ ‘ ಎಂಬ ಘೋಷಣೆಯೊಂದಿಗೆ ಯುವ ಸಮುದಾಯವನ್ನು ಹುರಿದುಂಬಿಸಿದರು ಎಂದರು.
ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮಹಾತ್ಮ ಗಾಂಧೀಜಿ, ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ದೇಶದ ಎಲ್ಲ ಮಹಾನ್ ನಾಯಕ ಮಾರ್ಗದಲ್ಲಿ ನಡೆದು ಭಾರತವನ್ನ ವಿಶ್ವಗುರುವಾಗಿ ಮಾಡಲು ಕೈಜೋಡಿಸ ಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಂದ್ರಶೇಖರಯ್ಯ, ಡಿವೈಎಸ್ಪಿ ಸಿದ್ದಾರ್ಥ್ ಗೋಯಲ್, ಇಒ ಸುದರ್ಶನ್, ಪೌರಾಯುಕ್ತ ಉಮಕಾಂತ್, ನಗರಸಭಾ ಅಧ್ಯಕ್ಷ ರಾಮ್ ಮೋಹನ್, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಿರಣ್, ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಲಾಯಿತು.
ವರದಿ: ಆನಂದ್ ತಿಪಟೂರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy