ಬೆಳಗಾವಿ : ಶ್ರೀಶೈಲ ಯಮನಪ್ಪ ಹಿಕ್ಕಡಿ ಇವರು ವಿಜಯಪುರ ಹಾಲಿ ಮಾದಾಪಟ್ಟಣ, ಜಿಗಣ ಹೋಬಳಿ, ಆಣೆಕಲ್ಲ ತಾಲೂಕಿನ, ಜಿಲ್ಲಾ ಬೆಂಗಳೂರು ನಗರ ಇವರ ಮಗಳು ಜ್ಯೋತಿ ಶ್ರೀಶೈಲ ಹಿಕ್ಕಡಿ ಇವಳು ತಮ್ಮೂರಾದ ವಿಜಯಪುರದಿಂದ ಬೆಳಗಾವಿಗೆ ಬಂದು ಈಗ 15 ದಿವಸಗಳಿಂದ ಬೆಳಗಾವಿ ಜಿಲ್ಲೆ ಬೆಳಗಾವಿ ರಥಗಲ್ಲಿಯಲ್ಲಿರುವಹ ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದು, ಆಗಷ್ಟ 12 ರಂದು ಸಾಯಂಕಾಲ 5 ಗಂಟೆಗೆ ಮನೆಯಲ್ಲಿ ಏನೂ ಹೇಳದೇ, ಕೇಳದೇ ಮನೆಯಿಂದ ಹೊರಗೆ ಹೋಗಿ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ.
ವಯಸ್ಸು 20 ವರ್ಷ, 4 ಪೂಟ 8 ಇಂಚ ಎತ್ತರ, ದುಂಡು ಮುಖ, ನೆಟ್ಟನೆಮೂಗು, ಸಡಪಾತಳ ಮೈಕಟ್ಟು, ಗೋದಿಗೆಂಪು ಮೈಬಣ್ಣ, ನೇರಳೆ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಜೀನ್ಸ ಪ್ಯಾಂಟ್ ಧರಿಸಿರುತ್ತಾಳೆ, ಪಿಯುಸಿ ದ್ವೀತಿಯ ವರ್ಷ ಶಿಕ್ಷಣವನ್ನು ಕಲಿತಿದ್ದು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾಳೆ.
ಈ ಪ್ರಕಾರ ಚಹರೆಯುಳ್ಳ ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಆಯುಕ್ತರು, ಬೆಳಗಾವಿ ರವರಿಗೆ ಅಥವಾ ಪೊಲೀಸ್ ಇನ್ಸಪೆಕ್ಟರ, ಶಹಾಪೂರ ಪೊಲೀಸ ಠಾಣೆ ಬೆಳಗಾವಿ ದೂರವಾಣ ಸಂ-0831-2405244, ಪಿ. ಐ, ಶಹಾಪೂರ ಪಿಎಸ್. ಮೋ ನಂ; 9480804046 ಹಾಗೂ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ 0831-2405233 ಇವರನ್ನು ಸಂಪರ್ಕಿಸಬೇಕು ಶಹಾಪೂರ ಪೊಲೀಸ ಠಾಣೆ ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy