ಗದಗ : ಮಲಗಿದ್ದ ತಂದೆಯ ತಲೆಗೆ ಕೊಡಲಿಯಿಂದ ಹೊಡೆದು ಸ್ವಂತ ಮಗನೇ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಹುಲಕೋಟೆ ಗ್ರಾಮದಲ್ಲಿ ನಡೆದಿದೆ. ಕುಡಿದು ಗಲಾಟೆ ಮಾ ಡುತ್ತಿದ್ದ ತಂದೆಯ ವರ್ತನೆಯಿಂದ ಬೇಸತ್ತ ಮಗ ಈ ಕೃತ್ಯ ಎಸಗಿದ್ದಾನೆ. ತಂದೆಯನ್ನೇ ಕೊಲೆ ಮಾಡಿದ ಮಗನನ್ನು ವಿಜಯ್ ಚಿಕ್ಕನಟ್ಟಿ ಎಂದು ಗುರುತಿಸಲಾಗಿದೆ. ಇನ್ನು ಗಣೇಶ್ ಚಿಕ್ಕನಟ್ಟಿ ಮಗನಿಂದ ಹತನಾದ ತಂದೆ.
51 ವರ್ಷದ ಗಣೇಶ್ ಕಳೆದ ಕೆಲ ವರ್ಷದಿಂದ ಕುಡಿತದ ದಾಸನಾಗಿದ್ದ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಗಣೇಶ್, ಸಂಜೆ ಆಗುತ್ತಿದ್ದಂತೆಯೇ ಕಂಠಪೂರ್ತಿ ಕುಡಿದು ಕಿರಿಕ್ ಶುರು ಮಾಡುತ್ತಿದ್ದ. ಕುಡಿದು ಬಂದು ಹೆಂಡತಿ ಮಕ್ಕಳನ್ನ ಪೀಡಿಸೋದು ಗಣೇಶನ ನಿತ್ಯದ ಕಾಯಕವಾಗಿತ್ತು. ಇದರಿಂದ ಬೇಸತ್ತಿದ್ದ ಗಣೇಶನ ಕಿರಿಯ ಮಗ, ಊರು ಬಿಟ್ಟು ಅಕ್ಕನ ಮನೆ ಸೇರಿದ್ದ ಆದರೆ ಹಿರಿಯ ಮಗ ಊರಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದು, ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ.
ದಿನ ನಿತ್ಯ ಈ ರೀತಿ ಕಿರಿ ಕಿರಿ ಮಾಡುತ್ತಿದ್ದ ತಂದೆಯ ಕೃತ್ಯದಿಂದ ವಿಜಯ್ ಬೇಸತ್ತು ಹೋಗಿದ್ದ. ಊರು ಬಿಟ್ಟು ಹೋಗುವುದಾಗಿ ಅನೇಕ ಬಾರಿ ತನ್ನ ತಾಯಿ ಬಳಿ ಕೂಡಾ ಹೇಳಿಕೊಂಡಿದ್ದ. ಆದರೆ ನಿನ್ನೆ ಕೆಲಸಕ್ಕೆ ರಜೆ ಹಾಕಿದ್ದ ವಿಜಯ್, ಸಂಜೆ ತಂದೆಯನ್ನ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಮೂರು ವರ್ಷದ ಹಿಂದಷ್ಟೇ ಮನೆ ಕಟ್ಟಿಸಿದ್ದ ವಿಜಯ್ ಭವಿಷ್ಯದ ಬಗ್ಗೆ ಅಪಾರ ಕನಸ್ಸು ಕಟ್ಟಿಕೊಂಡಿದ್ದ. 26 ವರ್ಷದ ವಿಜಯ್ ಗೆ ಎಲ್ಲರಂತೆ ಜೀವನ ನಡೆಸಬೇಕು ಎಂಬ ಆಸೆ ಇಟ್ಟುಕೊಂಡಿದ್ದ. ಆದರೆ ದಿನ ಬೆಳಗಾದರೆ ಕುಡಿದು ಬರುವ ತಂದೆಯ ವರ್ತನೆಯಿಂದ ಬೇಸತ್ತಿದ್ದ. ಇದೇ ಬೇಸರಕ್ಕೆ ವಿಜಯ್ ತಂದೆಯ ಹತ್ಯೆ ಮಾಡಿದ್ದಾನೆ ಎನ್ನುವುದು ಸ್ಥಳೀಯರ ಮಾತು. ಹೀಗೆ ತಂದೆಯನ್ನು ಕೊಲೆಗೈದ ನಂತರ ವಿಜಯ್ ಪೊಲೀಸರಿಗೆ ಶರಣಾಗಿದ್ದಾನೆ..
ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಸಿಎನ್ ಹರಿಹರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಣೇಶ್ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗದಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy