ಸರಗೂರು: ತಾಲ್ಲೂಕಿನ ಪಟ್ಟಣದ ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿಅಂಬೇಡ್ಕರ್ ರವರ ಭಾವಚಿತ್ರವನ್ನು ಇಡದೆ ಆಚರಣೆ ಮಾಡಿದ ವಿಚಾರ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಕರ್ನಾಟಕ ಭೀಮ ಸೇನೆ ಮತ್ತು ಪ್ರಗತಿಪರ ಸಂಘಟನೆಗಳು ಘಟನೆಯನ್ನು ಖಂಡಿಸಿವೆ.
ಸ್ವಾತಂತ್ರ್ಯೋತ್ಸವದ ವೇಳೆ ಅಂಬೇಡ್ಕರ್ ಅವರ ಫೋಟೋ ಬಳಸಿ ಎಂದು ಮನವಿ ಮಾಡಿದರೆ, ನಿಮ್ಮ ಬಳಿಯಲ್ಲಿ ಸುತ್ತೋಲೆ ಇದೆಯಾ? ಎಂಬ ಉದ್ಧಟತನದ ಪ್ರಶ್ನೆಗಳನ್ನು ಸಿಬ್ಬಂದಿ ಕೇಳಿದ್ದು, ಅಂಬೇಡ್ಕರ್ ಅವರ ಬಗ್ಗೆ ಇವರಿಗೆ ಯಾಕಿಷ್ಟು ಅಸಹನೆ? ಎಂದು ಪ್ರಶ್ನಿಸಿರುವ ಹೋರಾಟಗಾರರು, ಇಂತಹವರು ಸಂವಿಧಾನದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹರಲ್ಲ, ತಕ್ಷಣವೇ ಕೆಲಸದಿಂದ ಕಿತ್ತು ಹಾಕಿ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದರೆ, ಬೃಹತ್ ಹೋರಾಟವನ್ನು ರೂಪಿಸುತ್ತೇವೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.
ಘಟನೆ ಸಂಬಂಧ ಆಸ್ಪತ್ರೆಯ ಸಿಬ್ಬಂದಿ ಡಾ ಡೇವಿಸ್ ಚಾಹಲ್ ಮಾತನಾಡಿ, ನಮ್ಮ ಸಿಬ್ಬಂದಿ, ನಾವು ಅಂಬೇಡ್ಕರ್ ರವರ ಭಾವಚಿತ್ರವನ್ನು ಇಡದೆ ಸ್ವಾತಂತ್ರ್ಯ ಆಚರಿಸಿ ತಪ್ಪು ಮಾಡಿದ್ದೇವೆ ಕ್ಷಮೆಯಾಚನೆ ಕೇಳಿದ್ದರು. ಸುತ್ತೋಲೆ ಕೇಳಿದ ನಿಂಗರಾಜು ರಮೇಶ್ ಎಂಬವರ ಮೇಲೆ ನಮ್ಮ ಮೇಲಿನ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಕೆಲಸದಿಂದ ತೆಗೆದು ಹಾಕುತ್ತವೆ ಎಂದು ಭರವಸೆ ನೀಡಿದರು.
ಕರ್ನಾಟಕ ಭೀಮ ಸೇನೆ ಸರಗೂರು ತಾಲ್ಲೂಕು ಅಧ್ಯಕ್ಷ ಮಹೇಂದ್ರ ಹೂವಿನಕೊಳ, ಸಂವಿಧಾನ ಸಂರಕ್ಷಣಾ ಸಮಿತಿಯ ಖಜಾಂಚಿ ಗ್ರಾಮಿಣ ಮಹೇಶ್ ಘಟನೆಯನ್ನು ಖಂಡಿಸಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವದ ವೇಳೆ ಅಂಬೇಡ್ಕರ್ ಫೋಟೋ ಬಳಸಲು ಮನವಿ ಮಾಡಿದ ವೇಳೆ ಆಸ್ಪತ್ರೆಯ ಅಧಿಕಾರಿ ಸುತ್ತೋಲೆ ಕೊಡಿ ಎಂದು ಬೇಜವಾಬ್ದಾರಿಯಿಂದ ಮಾತನಾಡಿದ್ದು, ಈ ಬಗ್ಗೆ ನಮ್ಮ ತುಮಕೂರು ಮಾಧ್ಯಮ ವರದಿ ಮಾಡಿತ್ತು. ಈ ಬಗ್ಗೆ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ, ತಾಲೂಕಿನ ವಿವಿಧ ಸಂಘಟನೆಗಳನ್ನು ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಸರಗೂರು ಶಿವಣ್ಣ, ಖಜಾಂಚಿ ಗ್ರಾಮಿಣ ಮಹೇಶ್, ಕರ್ನಾಟಕ ಭೀಮ ಸೇನೆ ಅಧ್ಯಕ್ಷ ಹೂವಿನಕೊಳ ಮಹೇಂದ್ರ, ಉಪಾಧ್ಯಕ್ಷ ದಯಾನಂದ ಲಂಕೆ.ಶಿವರಾಜು ಲಂಕೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ಕೂಡಗಿ ಗೊವಿಂದರಾಜು, ಹೋರಾಟಗಾರ ಸರಗೂರು ಕೃಷ್ಣ, ಮೂರ್ತಿ ಹಳೆಯೂರು, ವಿಶ್ವ, ಸೋಮಣ್ಣ, ಉಮೇಶ ಹುಲ್ಲೇಮಾಳ, ಮಹೇಶ್ ಮುಳ್ಳೂರು, ಸತೀಶ್ ಲಂಕೆ, ನಟೇಶ್ ಹುಣಸಹಳ್ಳಿ ಇನ್ನೂ ಮುಖಂಡರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz