ತುಮಕೂರು: ನಗರದ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನಿಷ್ಠ ಮೂಲಭೂತ ಸೌಲಭ್ಯವನ್ನೂ ಒದಗಿಸದ ಹಿನ್ನೆಲೆಯಲ್ಲಿ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರವು ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ಮೂಲಭೂತ ಸೌಕರ್ಯ ಒದಗಿಸಲು 200 ಲಕ್ಷ ರೂಪಾಯಿಗಳು ಬಿಡುಗಡೆಯಾಗಿ 9 ತಿಂಗಳುಗಳು ಕಳೆದರೂ ಕಟ್ಟಡ ಕಾಮಗಾರಿ ಅನುಷ್ಠಾನವಾಗದೇ ಕಾಲೇಜು ಶಿಕ್ಷಣ ಇಲಾಖೆ ಆಡಳಿತ ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗುವವರೆಗೂ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದೆ.
ಹೋರಾಟದ ನೇತೃತ್ವ ವಹಿಸಿರುವ ಸಿದ್ದಲಿಂಗೇಗೌಡರು, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ನಿರ್ದೇಶಕರಾದ ಅಪ್ಪಾಜಿ ಗೌಡರನ್ನು ತರಾಟೆಗೆತ್ತಿಕೊಂಡು, ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯ ಹಾಗೂ ಜವಾಬ್ದಾರಿಯ ಪಾಠ ಹೇಳಿದರು.
ಶಾಲೆಯ ವಿದ್ಯಾರ್ಥಿಗಳಿಗೆ ಸರಿಯಾದ ಮೂಲಭೂತ ವ್ಯವಸ್ಥೆಗಳಿಲ್ಲ. ಕುಡಿಯುವ ನೀರು ಕೂಡ ಇಲ್ಲ. ಹೆಣ್ಣು ಮಕ್ಕಳು ಕಲಿಯುವ ವಿದ್ಯಾಲಯದಲ್ಲಿ ಶೌಚಾಲಯವೇ ಇಲ್ಲ. ಇದೆಲ್ಲ ಸೂಕ್ಷ್ಮವಾದ ವಿಷಯವಾಗಿದ್ದು, ಇದನ್ನು ಸರ್ಕಾರಿ ಅಧಿಕಾರಿಗಳಾದವರು ತಿಳಿದಿರಬೇಕಲ್ಲವೇ? ಎಂದು ಅಪ್ಪಾಜಿ ಗೌಡರನ್ನು ತರಾಟೆಗೆತ್ತಿಕೊಂಡರು.
ಹೋರಾಟದಲ್ಲಿ ಸಿದ್ದಲಿಂಗೇಗೌಡರು, ದರ್ಶನ್, ವಕೀಲರಾದ ಗಣೇಶ್ , ಆಟೋ ಚಾಲಕರಾದ ನವೀನ್, ಅರುಣ್ ಕೃಷ್ಣಯ್ಯ ಮುಂತಾದವರು ಭಾಗಿಯಾದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz