ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಮಾದಿಗ ಸಮುದಾಯದ ಆದಿ ಜಾಂಬವ ಸಹಕಾರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘವನ್ನು ಅಸ್ತಿತ್ವಕ್ಕೆ ತರಲಾಯ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ದುಂಡ ಓಬಳೇಶ್, ಎಲ್ಲಾ ಸಮುದಾಯಗಳಿಗೂ ಎಲ್ಲಾ ಜಾತಿಗಳಿಗೂ ಒಂದೊಂದು ಸಹಕಾರ ಸಂಘಗಳು ಇದೆ. ಹಾಗೆಯೇ ನಮ್ಮ ತುರುವೇಕೆರೆಯಲ್ಲೂ ಮಾದಿಗ ಸಮುದಾಯಕ್ಕೆ ಸಹಕಾರ ಸಂಘವನ್ನು ಮಾಡಬೇಕೆನ್ನುವ ಮಹಾದಾಸೆಯಿಂದ ನಮ್ಮ ಜಾತಿಯ ಮುಖಂಡರುಗಳ ಸಭೆಗಳನ್ನು ಕರೆದು ಚರ್ಚಿಸಿ ಕೊನೆಗೆ ಒಂದು ಹಂತಕ್ಕೆ ಬಂದು ಈ ದಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಯು ನಡೆದಿದೆ ಎಂದು ತಿಳಿಸಿದರು.
ನಮ್ಮ ಜಾತಿಯಲ್ಲಿ ಹಿಂದುಳಿದ ಬಡ ಜನರಿಗೆ ಸಹಾಯ ಮಾಡುವ ಮತ್ತು ಆರ್ಥಿಕವಾಗಿ ಸದೃಢರಾಗಿ ಮಾಡುವ ಶೈಕ್ಷಣಿಕವಾಗಿ ಬೆಳೆಸುವ ಉದ್ದೇಶದಿಂದ ಈ ಸಹಕಾರ ಸಂಘವನ್ನು ರಚನೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಸಂಘದ ಅಧ್ಯಕ್ಷರಾಗಿ ದುಂಡ ಓಬಳೇಶ್, ಉಪಾಧ್ಯಕ್ಷರಾಗಿ ಮೇಗ ಲಹಳ್ಳಿ ಮಂಜಯ್ಯ , ಕಾರ್ಯದರ್ಶಿಯಾಗಿ ನಂಜಪ್ಪ ಮೇಗಲಹಳ್ಳಿ, ಉಪ ಕಾರ್ಯದರ್ಶಿಯಾಗಿ ಕಮಲ ನೀರಗುಂದ, ಪ್ರಧಾನ ಕಾರ್ಯದರ್ಶಿಯಾಗಿ ಎ.ಹೊಸಹಳ್ಳಿ ಚಂದ್ರಯ್ಯ ಜಿ., ಖಜಾಂಚಿಯಾಗಿ ದಂಡಿನ ಶಿವರ ಲಕ್ಷ್ಮೀಶ್, ಸಂಘಟನಾ ಕಾರ್ಯದರ್ಶಿಯಾಗಿ ಕೋಳಘಟ್ಟ ಕೇಶವ್, ಕಾನೂನು ಸಲಹೆಗಾರರಾಗಿ ಗುಡ್ಡೇನಹಳ್ಳಿ ಅಡ್ವಕೇಟ್ ಮಂಜುನಾಥ್, ಮಾಧ್ಯಮ ಸಲಹೆಗಾರರಾಗಿ ಪಾರ್ಥಸಾರಥಿ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ವರದಿ: ಸುರೇಶ್ ಬಾಬು, ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz