nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗ್ಯಾಸ್ ಬಳಕೆ ವೇಳೆ ಮಹಿಳೆಯರು ಸುರಕ್ಷತಾ ಕ್ರಮ ಅನುಸರಿಸಿ: ಮಾಜಿ ಸಚಿವ ಎಂ.ಶಿವಣ್ಣ ಸಲಹೆ

    August 31, 2025

    ಅತಿವೃಷ್ಟಿ: ಬೀದರ್ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯ

    August 31, 2025

    ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಬಾಲಕ ಸಾವು: ಹಲವರಿಗೆ ತೀವ್ರ ಗಾಯ

    August 30, 2025
    Facebook Twitter Instagram
    ಟ್ರೆಂಡಿಂಗ್
    • ಗ್ಯಾಸ್ ಬಳಕೆ ವೇಳೆ ಮಹಿಳೆಯರು ಸುರಕ್ಷತಾ ಕ್ರಮ ಅನುಸರಿಸಿ: ಮಾಜಿ ಸಚಿವ ಎಂ.ಶಿವಣ್ಣ ಸಲಹೆ
    • ಅತಿವೃಷ್ಟಿ: ಬೀದರ್ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯ
    • ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಬಾಲಕ ಸಾವು: ಹಲವರಿಗೆ ತೀವ್ರ ಗಾಯ
    • ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗೆ ಕರೆದೊಯ್ದ ಎಸ್ ಐಟಿ ಅಧಿಕಾರಿಗಳು
    • ಕೊರಟಗೆರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ
    • ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ: ಬಿಜೆಪಿ ಬಳಿಕ ಜೆಡಿಎಸ್ ನಿಂದಲೂ ಆರೋಪ
    • ವಿದ್ಯಾರ್ಥಿಗಳು ಸ್ವಂತ ಉದ್ಯಮಿಗಳಾಗಿ: ಕಾಪರ್ ಇಂಡಸ್ಟ್ರೀಸ್ ಚೇರ್ಮನ್ ಚಂದ್ರಶೇಖರ್ ಸಲಹೆ
    • ದೇವರ ಹೆಸರಿಗೆ ಕಳಂಕ ಆರೋಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂರಕ್ಷಣಾ ಅಭಿಯಾನ ಸಮಿತಿಯಿಂದ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಾವಿನ ದ್ವೇಷಕ್ಕೆ ಕಂಗಾಲಾದ ಕುಟುಂಬಸ್ಥರು: ಒಂದೇ ಜಾಗದಲ್ಲಿ ಬಲಿಯಾದವರೆಷ್ಟು ಗೊತ್ತಾ?
    ಕೊರಟಗೆರೆ August 24, 2022

    ಹಾವಿನ ದ್ವೇಷಕ್ಕೆ ಕಂಗಾಲಾದ ಕುಟುಂಬಸ್ಥರು: ಒಂದೇ ಜಾಗದಲ್ಲಿ ಬಲಿಯಾದವರೆಷ್ಟು ಗೊತ್ತಾ?

    By adminAugust 24, 2022No Comments2 Mins Read

    ಅದು ಒಂದೇ ಕುಟುಂಬ, ಒಂದೇ ಬುಡಕಟ್ಟು,ಒಂದೇ ಮನೆ ದೇವರಿಗೆ ಪೂಜೆ ಮಾಡೋ ಕುಟುಂಬವದು,ಒಟ್ಟು 20 ಕುಟುಂಬ ಇರುವವರಿಗೆ ಅದೊಂದು ಶಾಪ ಕಾಡುತ್ತಿದೆ,ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಅವರ ಮನೆತನದಲ್ಲಿ ಸಾವುವಾಗುತ್ತಿದೆ. ಅದು ಕೂಡ ಕೇವಲ ಅರ್ಧ ಕಿಲೋಮೀಟರ್ ದೂರದ ಅಂತರದಲ್ಲಿ, ಇಷ್ಟಕ್ಕೂ ಏನದು ಯಾಕೆ ಅಂತೀರಾ ,ಈ ವರದಿ ನೋಡಿ..

    ಹೌದು..ನಾವು ಇವತ್ತು ಹೇಳಲು ಹೋರಟಿರೋ ಸ್ಟೋರಿ ನಿಜಕ್ಕೂ ನಂಬಲಾರದ, ಊಹೆಗೂ ನಿಲುಕದ ಸಂಗತಿ, ಈ ಸಂಗತಿಗಳನ್ನು ಕೇಳಿದ್ರೇ ನೀವು ಬೆಚ್ಚಿಬೀಳೋದು ಗ್ಯಾರಂಟಿ.


    Provided by
    Provided by

    ಇದು ಕಲ್ಪತರು ನಾಡು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ತೊಗರಿಘಟ್ಟ ಗ್ರಾಮ. ಗ್ರಾಮದಲ್ಲಿ ದೊಡ್ಡ ದೊಡ್ಡ ಕುಟುಂಬಗಳು ವಿದ್ಯಾವಂತರು ಇರೋದು ಸಹಜ, ಹೀಗಿರುವಾಗ ಆ ಒಂದು ಮನೆತನದಲ್ಲಿ  ಪ್ರತಿ ನಾಲ್ಕು ಅಥವಾ ಐದು ವರ್ಷಕ್ಕೆ ಒಂದು ಅನಾಹುತ ನಡೆದುಹೋಗುತ್ತಿದೆ. ಅಂದುಕೊಳ್ಳದಿದ್ದ ರೂಪದಲ್ಲಿ ಸಾವು ಎದುರಾಗುತ್ತಿದೆ.

    ಈ  ಗ್ರಾಮದ ಧರ್ಮಣ್ಣ ಎನ್ನೋವವರ ಕುಟುಂಬ, ದೊಡ್ಡ ಕುಟುಂಬ. ಒಟ್ಟು20 ಕುಟುಂಬ ಅಣ್ಣ ತಮ್ಮಂದಿರು ಇದ್ದಾರೆ. ಈ ಮೊದಲು ಎಲ್ಲಾರೂ ಒಂದಾಗೇಯೇ ಇದ್ದರು. ಆದ್ರೆ ಕಾಲ ಕಳೆದಂತೆ ಅಣ್ಣ ತಮ್ಮಂದಿರು ದೂರವಾಗುತ್ತಾ, ತಮ್ಮ ಕುಟುಂಬಗಳನ್ನು ಮಾಡಿಕೊಂಡು ಜೀವನ ಮಾಡುತ್ತಾ ಬಂದಿದ್ದಾರೆ. ಈ ಕುಟುಂಬದಲ್ಲಿ ಪ್ರತಿ ನಾಲ್ಕೈದು ವರ್ಷಕ್ಕೆ ಒಂದು ಸಾವಾಗುತ್ತಿದೆ. ಇದ್ರಿಂದ ಇಡೀ ಕುಟುಂಬ ಜೊತೆಗೆ ಗ್ರಾಮವೇ ಶಾಕ್ ಆಗಿದೆ.

    ಇಷ್ಟಕ್ಕೂ ಯಾಕೆ ಈ ಕುಟುಂಬದವರು ಸಾಯುತ್ತಿದ್ದಾರೆ ಎಂದು ಪ್ರಶ್ನಿಸಿದ್ರೆ,  ಈ ಕುಟುಂಬಕ್ಕೆ ಒಂದು ಶಾಪ ಇದೆಯಂತೆ ಅದು ಮುನಿಯಪ್ಪ ಶಾಪನೋ ಅಥವಾ ನಾಗರ ಶಾಪವೋ ಗೊತ್ತಿಲ್ಲ, ಈ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಉತ್ತರ ಸಿಗಲಿಲ್ಲ. ಆದರೆ, ಒಂದೇ ಮನೆತನದ ಐವರು ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ನಡೆದಿದೆ‌‌. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಹಾವು ಕಚ್ಚಿ ಸಾಯುತ್ತಿದ್ದು,  ಇದ್ರಿಂದ ಧರ್ಮಣ್ಣ ಕುಟುಂಬ ಬೆಚ್ಚಿಬಿದ್ದಿದ್ದಾರೆ.

    ಕಳೆದ ಬುಧವಾರ ರಾತ್ರಿ ಗ್ರಾಮದ ಗೋವಿಂದರಾಜು ಹೊಲಕ್ಕೆ ನೀರು ಕಟ್ಟಲು ಹೋಗಿದ್ದಾರೆ.ಈ ವೇಳೆ ಕಾದು ನಿಂತಿದ್ದ ಹಾವು ಕಾಲಿಗೆ ಕಚ್ಚಿದೆ, ಕೂಡಲೇ ಆಸ್ಪತ್ರೆ ಗೆ ಸಾಗಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

    ಇನ್ನೂ ಕಳೆದ 20-25 ವರ್ಷಗಳಲ್ಲಿ ಧರ್ಮಣ್ಣ ಕುಟುಂಬದ ಹನುಮಂತಪ್ಪ, ಧರ್ಮಣ್ಣ, ವೆಂಕಟೇಶ್,  ಶ್ರೀನಿವಾಸ್ ಹಾಗೂ ಮೊನ್ನೆ ಗೋವಿಂದರಾಜು ಒಂದೇ ಜಾಗದಲ್ಲಿ ಹಾವಿಗೆ ಬಲಿಯಾಗಿದ್ದಾರೆ. ಅದು ಕೂಡ ಕೇವಲ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಎಲ್ಲರೂ ಹಾವಿನ ಕಡಿತಕ್ಕೊಳಗಾಗಿದ್ದಾರೆ.

    ಹೊಲದ ಬಳಿ ಮುನಿಯಪ್ಪ ಗುಡಿಯಿದ್ದು,  ಈ ಮೊದಲು 20 ಕುಟುಂಬ ಸೇರಿ ಪೂಜಿಸಿ ಅಡುಗೆ ಮಾಡಿ ಮುನಿಯಪ್ಪ  ಪೂಜೆ ಮಾಡುತ್ತಿದರಂತೆ.  ಆದರೆ ಕಾಲಕಳೆದಂತೆ ಮನೆಗೆ ಸೊಸೆಯಂದಿರು ಬಂದಂತೆ  ಕುಟುಂಬಗಳು ದೂರವಾಗಿದ್ದರೆನ್ನಲಾಗಿದೆ . ಇದೀಗ ನಾಲ್ಕೈದು ಕುಟುಂಬಗಳು ಸೇರಿ ಪೂಜೆ ಮಾಡುತ್ತಿದ್ದಾರಂತೆ. ಇದು ಕೂಡ ಹಾವಿನ ದ್ವೇಷಕ್ಕೆ ಕಾರಣ ಇರಬಹುದು  ಎನ್ನುತ್ತಿದ್ದಾರೆ. ಈ ಹಿಂದೆ ತಮ್ಮ ಹೊಲದ ಬಳಿ ರಸ್ತೆ ಬದಿಯಲ್ಲಿ ಇದ್ದ ಅರಳಿಮರವನ್ನ ಧರ್ಮಣ್ಣ ಕಡಿದು ಹಾಕಿಸಿದ್ದರಂತೆ, ಅದರ ಶಾಪದಿಂದ ಹೀಗೆ ಆಗುತ್ತಿರಬಹುದು ಅಂತ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಇನ್ನೂ ಶಾಸ್ತ್ರ ಕೇಳಿದ್ರೆ ಎಲ್ಲಾರೂ ಒಂದಾಗಿ ಸೇರಿ ಮುನಿಯಪ್ಪ ಪೂಜೆ ಮಾಡಿದ್ರೆ ಸಮಸ್ಯೆ ಬಗೆಹರಿಯಬಹುದು ಅಂತಾ ಹೇಳಿದ್ದಾರಂತೆ. ಸದ್ಯ ಮನೆತನದಲ್ಲಿ ಬರೀ ಗಂಡಸರೇ ಬಲಿಯಾಗಿದ್ದು, ಆತಂಕಕ್ಕೀಡು ಮಾಡಿದೆ. ಇನ್ನೂ ಒಟ್ಟು ಇದೇ ಕುಟುಂಬದ 11 ಜನರಿಗೆ ಹಾವು ಕಚ್ಚಿದ್ದು, ಆರು ಜನರು ಉಳಿದಿದ್ದಾರೆ. ಐದು ಮಂದಿ ಸಾವನ್ನಪ್ಪಿದ್ದಾರೆ.

    ಇದು ನಿಜಕ್ಕೂ ನಂಬಲಾರದ ಸಂಗತಿ. ಹಾವಿನ ದ್ವೇಷವೋ ದೇವರ ಶಾಪವೋ  ಅಥವಾ ಆಕಸ್ಮಿಕ ಸಾವೋ ಒಟ್ಟು ಬಾಳಿ ಬದುಕಬೇಕಿದ್ದ ಪುರುಷರು ಮಾತ್ರ ಬಲಿಯಾಗುತ್ತಿರುವುದು ದುರಂತವಾಗಿದೆ.

    ವರದಿ: ಮಂಜು ಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಕೊರಟಗೆರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ

    August 30, 2025

    ಶ್ರೀ ದೊಡ್ಡಮ್ಮ ದೇವಿ ಸ್ಥಿರ ಬಿಂಬ ಪ್ರತಿಷ್ಠಾಪನ ಕುಂಭಾಭಿಷೇಕ ಮಹೋತ್ಸವ ಹಾಗೂ ಚಂಡಿಕಾ ಹೋಮ

    August 29, 2025

    ಸೆ.13ರಂದು ರಾಷ್ಟ್ರೀಯ ಲೋಕಾ ಅದಾಲತ್ 2025: ಸಂಧಾನದ ಮೂಲಕ ವ್ಯಾಜ್ಯಗಳ ಇತ್ಯರ್ಥ: ನ್ಯಾಯಾಧೀಶೆ ನೂರುನ್ನೀಸ

    August 23, 2025
    Our Picks

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025

    ದೀಪಾವಳಿಗೆ ಡಬಲ್ ಗಿಫ್ಟ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

    August 15, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಗ್ಯಾಸ್ ಬಳಕೆ ವೇಳೆ ಮಹಿಳೆಯರು ಸುರಕ್ಷತಾ ಕ್ರಮ ಅನುಸರಿಸಿ: ಮಾಜಿ ಸಚಿವ ಎಂ.ಶಿವಣ್ಣ ಸಲಹೆ

    August 31, 2025

    ಸರಗೂರು:  ಮಹಿಳೆಯರು ಮುಂಜಾಗೃತ ಕ್ರಮವಾಗಿ ಗ್ಯಾಸ್ ಸುರಕ್ಷತಾ ಕ್ರಮ ಅನುಸರಿಸಿಕೊಂಡು ಅಡುಗೆ ಮಾಡಬೇಕು ಎಂದು ಸೌಜನ್ಯ ಗ್ಯಾಸ್ ಏಜೆನ್ಸಿಯ ಮಾಲೀಕರು,…

    ಅತಿವೃಷ್ಟಿ: ಬೀದರ್ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯ

    August 31, 2025

    ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಬಾಲಕ ಸಾವು: ಹಲವರಿಗೆ ತೀವ್ರ ಗಾಯ

    August 30, 2025

    ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗೆ ಕರೆದೊಯ್ದ ಎಸ್ ಐಟಿ ಅಧಿಕಾರಿಗಳು

    August 30, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.