ತುಮಕೂರು : ನ್ಯಾಷನಲ್ ಹೈವೇ 4 ರಲ್ಲಿ ಬೆಳಗಿನ ಜಾವ ಸರಿ ಸುಮಾರು 4ಗಂಟೆ ಸಮಯದಲ್ಲಿ ಕಳ್ಳಂಬೆಳ್ಳ ಮತ್ತು ಚಿಕ್ಕನಹಳ್ಳಿಯ ಸಮೀಪದ ಬಾಳೇನಹಳ್ಳಿಯ ಬಳಿ ಬೀಕರ ಅಪಘಾತ ನಡೆದಿದೆ.
ಕ್ರೂಜರ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕ್ರೂಜರ್ ನಲ್ಲಿದ್ದ ಒಂಬತ್ತು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಕೂಲಿ ಕಾರ್ಮಿಕರು ರಾಯಚೂರು ಮತ್ತು ಮಾನ್ವಿಯ ಭಾಗದವರಂದು ತಿಳಿದು ಬಂದಿದೆ.
ಕ್ರೂಜರ್ ವಾಹನದಲ್ಲಿ ಒಟ್ಟು 23 ಜನ ಕೂಲಿ ಕಾರ್ಮಿಕರು ಮಾನ್ವಿಯಿಂದ ಬೆಂಗಳೂರಿನ ಕಡೆಗೆ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 9 ಜನ ಕಾರ್ಮಿಕರು ಸ್ಥಳದಲ್ಲೇ ಮೃತರಾಗಿದ್ದು, ಉಳಿದ 14 ಜನ ಕಾರ್ಮಿಕರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅದರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂದರ್ಭದಲ್ಲಿ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್, ಎಸ್.ಪಿ. ರಾಹುಲ್ ಕುಮಾರ್ ಶಹಪುರ್ ವಾಡ್, ಅಡಿಷನಲ್ ಎಸ್ಪಿ ಉದ್ದೇಶ್, ಹಾಗೂ ಶಿರಾ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz