ತುಮಕೂರು: ಪಟ್ಟಣದ ಚಿಲುಮೆ ಪೊಲೀಸ್ ಸಮುದಾಯದ ಭವನದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಶಹಪೂರ್ ವಾಡ್, ರವರ ಮಾರ್ಗದರ್ಶನದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ಎಲ್ಲಾ ಸಮುದಾಯದ ಮುಖಂಡರುಗಳನ್ನು ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುವ ಮುಖಂಡರವರನ್ನ ಕರೆಸಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶಾಂತಿ ಸಭೆ ನಡೆಸಲಾಯಿತು.
ಗಣಪತಿ ಕೂರಿಸಲು ಯಾವ ಯಾವ ರೀತಿಯಲ್ಲಿ ಕ್ರಮ ಅನುಸರಿಸಬೇಕೆಂದು ತಿಳಿಸಲಾಯಿತು.ಈ ಸಭೆಯಲ್ಲಿ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಮಾನ್ಯ ನಗರ ಶಾಸಕರು,ಪೊಲೀಸ್ ಅಧಿಕ್ಷಕರು, ಹೆಚ್ಚವರಿ ಪೊಲೀಸ್ ಅದೀಕ್ಷಕರು, ಮಹಾನಗರಪಾಲಿಕೆಯ ಕಮಿಷನರ್ ರವರು, ಬೆಸ್ಕಾಂ ಅಧಿಕಾರಿಗಳು, ಅಗ್ನಿಶಾಮಕ ಠಾಣೆಯ ಮುಖ್ಯಸ್ಥರು, ಹಾಗೂ ಬೇರೆ ಬೇರೆ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದರು, ನಗರ ಡಿಎಸ್ಪಿ ಶ್ರೀನಿವಾಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ನಗರದ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಅನುಮತಿ ಇಲ್ಲದೆ ಯಾವುದೇ ಫ್ಲೆಕ್ಸ್ ಅಳವಡಿಸುವಂತಿಲ್ಲ, ಸ್ಥಳೀಯ ಠಾಣೆಯಲ್ಲಿ ಫ್ಲೆಕ್ಸ್ ಡಿಸೈನ್ ಅನುಮತಿ ಕಡ್ಡಾಯ, ಕಾನೂನು ಭಂಗ ತರುವಂತಹ ಯಾವ ಫ್ಲೆಕ್ಸ್ ಗಳಿಗೂ ಅನುಮತಿ ಇಲ್ಲ. ಡಿ.ಜೆ.ಸೌಂಡ್ ಸಿಸ್ಟಮ್ ಯಾವುದೇ ಕಾರಣಕ್ಕೂ ಹಾಕುವಂತಿಲ್ಲ ಎಂದು ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಶಹಪೂರ್ ವಾಡ್ ತಿಳಿಸಿದ್ದಾರೆ.
ವರದಿ : ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz