ತುಮಕೂರು ಗ್ರಾಮಾಂತರದ ಊರುಕೆರೆ ಗ್ರಾಮದಲ್ಲಿ ಊರುಕೆರೆ ಕೋಡಿ ಹರಿದಿದ್ದು, ಪರಿಣಾಮವಾಗಿ ಕೆರೆ ನೀರು ರಸ್ತೆ, ಗದ್ದೆ, ತೋಟ, ಜಮೀನುಗಳಿಗೆ ಹರಿದು ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಇಲ್ಲಿನ ಮುಖ್ಯ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಇದೇ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ರಾತ್ರಿ ಸುರಿದ ಭಾರೀ ಮಳೆಗೆ ಕೆರೆಕೋಡಿ ಹರಿದಿದ್ದು, ಕೆರೆ ಕೋಡಿ ಹರಿದಿರುವುದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ.
ಒಂದೇ ರಾತ್ರಿಗೆ ಕೆರೆ ಕೋಡಿ ಹರಿದಿದೆ. ಎಲ್ಲ ಹೊಲ ತೋಟಗಳಿಗೆ ನೀರು ತುಂಬಿ ಬಿಟ್ಟಿದೆ. ರೋಡಿನ ಮೇಲೆಯೇ ನೀರು ಹೋಗ್ತಾ ಇದೆ. ಹೂಳುಗಳನ್ನು ಸರಿಯಾಗಿ ತೆಗೆಯದ ಪರಿಣಾಮ ರಸ್ತೆಗೆ ನೀರು ನುಗ್ಗಿದೆ. ಸರ್ಕಾರದವರು ಬಂದು ಹೂಳು ತೆಗೆದು ನೀರು ಹೋಗಲು ವ್ಯವಸ್ಥೆ ಮಾಡಿದರೆ ಮಾತ್ರ ನೀರು ರಸ್ತೆಗೆ ಬರೋದನ್ನು ತಡೆಯಲು ಸಾಧ್ಯ ಎಂದು ನಮ್ಮತುಮಕೂರಿಗೆ ರೇವಣರುದ್ರಪ್ಪ ಎಂಬವರು ಪ್ರತಿಕ್ರಿಯಿಸಿದರು.
ಊರುಕೆರೆ ಗ್ರಾಮದ ಕೆರೆ ಕೋಡಿ ಹರಿದು ಸುಮಾರು 32 ವರ್ಷಗಳೇ ಆಗಿದ್ದವು. ಹಿಂದೆ ಇದ್ದ ಹಳ್ಳಗಳು ಮುಚ್ಚಿ ಹೋಗಿವೆ, ಸುತ್ತ ಮುತ್ತ ಮರಗಿಡಗಳು ಬಂದು ನೀರು ಹರಿಯಲು ಸಾಧ್ಯವಾಗದೇ ಕೆರೆ ನೀರು ರಸ್ತೆಗೆ ಬರುತ್ತಿದೆ ಎಂದು ಇದೇ ವೇಳೆ ಸಾರ್ವಜನಿಕರು ನಮ್ಮತುಮಕೂರಿಗೆ ಪ್ರತಿಕ್ರಿಯಿಸಿದರು.
ವರದಿ: ದಾಸಾಲುಕುಂಟೆ ಸಿದ್ದರಾಜು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz