ತುರುವೇಕೆರೆ: ತಾಲೂಕಿನ ಹೊಣಕೆರೆ ಗೊಲ್ಲರಟ್ಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಇಂದು ಮಾತೃಶ್ರೀ ಸಂಘದ ವತಿಯಿಂದ ಸಿರಿ ಧಾನ್ಯ ಬಳಕೆಯ ಕುರಿತು ವಿಚಾರಗೋಷ್ಠಿ ನಡೆಯಿತು.
ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷ ಜ್ಯೋತಿ ಸಿರಿಧಾನ್ಯ ಮಾರುಕಟ್ಟೆ ಮುಖ್ಯಸ್ಥ ರಾಜೇಶ್, ತಾಲೂಕು ಯಾದವ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಸ್ವಾಮಿ, ಒಕ್ಕೂಟ ಅಧ್ಯಕ್ಷ ಭಾಗೀರಥಮ್ಮ ಸಪ್ತಗಿರಿ ವಿದ್ಯಾ ಸಂಸ್ಥೆ ಬೆಂಗಳೂರು ಶ್ರೀನಿವಾಸ್ ಮತ್ತು ಎಸ್ ಡಿಎಂಸಿ ಅಧ್ಯಕ್ಷರಾದ ರಂಗಸ್ವಾಮಿ ಇವರು ವಿಚಾರಗೋಷ್ಠಿಯನ್ನು ಉದ್ಘಾಟನೆ ಮಾಡಲಾಯಿತು.
ಸಿರಿಧಾನ್ಯ ಮಾರುಕಟ್ಟೆ ಮುಖ್ಯಸ್ಥ ರಾಜೇಶ್ ಮಾತನಾಡಿ, ನಾವು ಬಳಸುವ ಎಲ್ಲಾ ಸಿರಿ ಧಾನ್ಯದಲ್ಲೂ ಕೃತಕ ಗೊಬ್ಬರ ಬಳಕೆ ಮಾಡಿ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಆದುದರಿಂದ ಉತ್ತಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಗುಣಮಟ್ಟದಲ್ಲಿ ಯಾವುದೇ ತರಹದ ಫರ್ಟಿಲೈಜರ್ ಬಳಸದೆಸಿರಿಧಾನ್ಯವನ್ನು ಉತ್ತಮ ರೀತಿಯಲ್ಲಿ ಬೆಳೆಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಪ್ರತಿಯೊಂದು ಜಿಲ್ಲೆಯಲ್ಲೂ ಈ ಸಿರಿಧಾನ್ಯ ಆಹಾರ ಪದಾರ್ಥಗಳ ಬಗ್ಗೆ ಅರಿವು ಮೂಡಿಸಿ ಮನೆ ಮನೆಗಳಿಗೆ ತಲುಪುವಂತ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ನಡೆಸಲಾಗುವುದು ಎಂದು ಹೇಳಿದರು.
ಈ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲೂಕು ಸಮನ್ವಯ ಸಮಿತಿ ಅಧಿಕಾರಿ ಲಾವಣ್ಯ, ಸಂಪನ್ಮೂಲ ಅಧ್ಯಾಪಕರಾದ ತಿರುಮಲೆಗೌಡ, ಸೊರವನಹಳ್ಳಿ ವಲಯದ ಮೇಲ್ವಿಚಾರಕರಾದ ಶ್ರೀಕಾಂತ್, ಆಂತರಿಕ ಲೆಕ್ಕ ಪರಿಶೋಧಕ ಗೋವರ್ಧನ್, ಕಾರ್ಯದರ್ಶಿ ಬಾಲಕೃಷ್ಣ, ಸೇವಾ ಪ್ರತಿನಿಧಿಯಾದ ಸುಧಾ, ಮಂಜುಳ, ಶಶಿರೇಖಾ ಸೇರಿದಂತೆ ಮಾತೃಶ್ರೀ ಸಂಘದ ಎಲ್ಲ ಪದಾಧಿಕಾರಿಗಳು ಊರಿನ ಗ್ರಾಮಸ್ಥರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy