ಬೆಳಗಾವಿ : ಜಿಲ್ಲಾ ಅಲ್ಪ ಸಂಖ್ಯಾತ ಕಾಂಗ್ರೆಸ್ ವತಿಯಿಂದ ಶಹಿದ್ ಭಗತ್ ಸಿಂಗ್ ಜಯಂತಿ ಆಚರಣೆ ಮಾಡಲಾಯಿತು ಬಳಿಕ ನಗರದ ತಿಲಕವಾಡಿಯಿಂದ ಕಾಂಗ್ರೆಸ್ ಭವನದವರೆಗೆ ಬೈಕ್ ರೈಲಿ ಮಾಡಲಾಯಿತು .
ನಂತರ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಜಿಲ್ಲಾ ಅಧ್ಯಕ್ಷರಾದ ಇಮ್ರಾನ್ ತಿಪ್ಪೇಕ ಮಾತನಾಡಿದ ಅವರು ಭಗತ್ ಸಿಂಗ್ ಅವರ ದೇಶಭಕ್ತಿ ನಮ್ಮೆಲ್ಲರಿಗೂ ಆದರ್ಶ ಮತ್ತು ಮಾರದರ್ಶಕವಾಗಿದೆ.
ಆದ್ದರಿಂದ ಭಗತ್ ಸಿಂಗ್ ಈ ದೇಶದ ಸರ್ವ ಶ್ರೇಷ್ಠ ಸ್ವತಂತ್ರ ಹೋರಾಟಗಾರರಾಗಿದ್ದಾರೆ ಭಾರತದ ಅಖಂಡತೆ, ಕೋಮ ಸೌಹಾರ್ದತೆಯ ಪ್ರತಿಕವಾಗಿದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತ ಉಪಾಧ್ಯಕ್ಷರಾದ ವೀಕಿ ಸಿಂಗ್ ಹಾಜಿ ಮುಸಗೊರಿಖಾನ್ ಡಿಸಿಸಿ ವೈಸ್ ಚೇರ್ಮನ್, ತಬ್ಬಸು ಮುಲ್ಲಾ ಡಿ ಸಿ ಸಿ ಉಪ ಅಧ್ಯಕ್ಷ ಖಾದಿರ್, ಡಿ ಸಿ ಸಿ ವೈಸ್ ಚೇರ್ಮನ್ ಅಕ್ಬರ್ ಸೇಕರ್, ಡಿಸಿಸಿ ವೈಸ್ ಚೇರ್ಮನ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


