nammatumakuru

    Subscribe to Updates

    Get the latest creative news from FooBar about art, design and business.

    What's Hot

    ಲಂಚಕ್ಕೆ ಕೈಯೊಡ್ಡಿದ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತರ ಬಲೆಗೆ!

    November 11, 2025

    ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ: ಅದ್ದೂರಿ ಕನ್ನಡ ರಾಜ್ಯೋತ್ಸವ

    November 11, 2025

    ತುಮಕೂರು | ಆರ್‌ ಎಸ್‌ ಎಸ್‌ ನಿಷೇಧಿಸಲು ಡಿಎಸ್ ಎಸ್  ಆಗ್ರಹ

    November 11, 2025
    Facebook Twitter Instagram
    ಟ್ರೆಂಡಿಂಗ್
    • ಲಂಚಕ್ಕೆ ಕೈಯೊಡ್ಡಿದ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತರ ಬಲೆಗೆ!
    • ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ: ಅದ್ದೂರಿ ಕನ್ನಡ ರಾಜ್ಯೋತ್ಸವ
    • ತುಮಕೂರು | ಆರ್‌ ಎಸ್‌ ಎಸ್‌ ನಿಷೇಧಿಸಲು ಡಿಎಸ್ ಎಸ್  ಆಗ್ರಹ
    • ರಂಗಾಯಣ: ನ.17ರಿಂದ 21ರವರೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕೋತ್ಸವ!
    • ಮನೆ–ಮನೆಗೆ ಪೊಲೀಸ್‌: ಮನೆಗಳಿಗೆ ಭೇಟಿ ನೀಡಿ ಅಹವಾಲು ಕೇಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ
    • ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯಲ್ಲಿ ಪ್ರತಿಧ್ವನಿಸಿದ ಬಾಲ್ಯ ವಿವಾಹ, ಪೋಕ್ಸೋ ಕೇಸ್
    • ನ.12, 13ರಂದು “ಚಿಲಿಪಿಲಿ!?” 39ನೇ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವ
    • ಅನಾಥ ಮಕ್ಕಳಿಗೆ ಪೋಷಕತ್ವ ಯೋಜನೆ ಲಾಭ ದೊರೆಯಬೇಕು: ರಮೇಶ್ ಸೂರ್ಯವಂಶಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಪೌಷ್ಠಿಕತೆ ತಡೆಗಟ್ಟಲು ಪೋಷಣ್ ಅಭಿಯಾನ ಕೇಂದ್ರ, ರಾಜ್ಯ ಸರ್ಕಾರದ ಬಹುದೊಡ್ಡ ಯೋಜನೆ:  ಡಾ.ಜಿ.ಪರಮೇಶ್ವರ್
    ಕೊರಟಗೆರೆ September 30, 2022

    ಅಪೌಷ್ಠಿಕತೆ ತಡೆಗಟ್ಟಲು ಪೋಷಣ್ ಅಭಿಯಾನ ಕೇಂದ್ರ, ರಾಜ್ಯ ಸರ್ಕಾರದ ಬಹುದೊಡ್ಡ ಯೋಜನೆ:  ಡಾ.ಜಿ.ಪರಮೇಶ್ವರ್

    By adminSeptember 30, 2022No Comments3 Mins Read
    dr g parameshwar

    ಕೊರಟಗೆರೆ: ತಾಲ್ಲೂಕಿನ  ಚನ್ನರಾಯನದುರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ  ಆಯೋಜಿಸಲಾಗಿದ್ದ ಪೋಷಣ್ ಅಭಿಯಾನದ ಅಡಿಯಲ್ಲಿ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ಗಳನ್ನು ಶಾಸಕರಾದ ಡಾ.ಜಿ.ಪರಮೇಶ್ವರ್  ಫಲಾನುಭವಿಗಳಿಗೆ ವಿತರಿಸಿದರು.

    ಬಳಿಕ ಮಾತನಾಡಿದ ಅವರು, ನಮ್ಮ ಹಳ್ಳಿಗಳಲ್ಲಿ ಮಾಡುತ್ತಿದ್ದ ಆಗಿನ ಅಡುಗೆಗಳು ತುಂಬ ಪೌಷ್ಟಿಕಾಂಶ ಕೂಡಿರುತ್ತಿತ್ತು. ಈಗ ಫಾಸ್ಟ್ ಫುಡ್ ಗಳ ಮೊರೆ ಹೋಗಿರುವ ನಮ್ಮ ಜನರಲ್ಲಿ ಪೌಷ್ಠಿಕಾಂಶ ಕುಗ್ಗುತ್ತಿದೆ. ಆದ್ದರಿಂದ ಎಲ್ಲರೂ ಆರೋಗ್ಯಕರವಾದ ಉಪಾಹಾರವನ್ನು ಸೇವಿಸುವ ಮೂಲಕ ಪೌಷ್ಟಿಕಾಂಶವನ್ನು ಹೆಚ್ಚಿಸಿಕೊಳ್ಳಿ, ಗರ್ಭಿಣಿಯರು, ಬಾಣಂತಿಯರು  ಹಾಗೂ ಹುಟ್ಟುವ ಮಕ್ಕಳಿಗೆ ಆದಷ್ಟು ಪೌಷ್ಟಿಕಾಂಶವುಳ್ಳ ಆಹಾರಗಳನ್ನು  ಕೊಡಿ ಎನ್ನುವುದೇ ಈ ಪೋಷಣ್ ಅಭಿಯಾನದ ಮುಖ್ಯ ಉದ್ದೇಶ. ಇಂತಹ ಅನೇಕ ಕಾರ್ಯಕ್ರಮಗಳು ಎಂದಿನಿಂದಲೂ ಸರ್ಕಾರಗಳು ರೂಪಿಸುತ್ತಿವೆ ಒಳ್ಳೆಯ ಆಹಾರಗಳನ್ನು ಸೇವಿಸಿ  ಎಲ್ಲರೂ  ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.


    Provided by
    Provided by

    ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ: ಡಾ.ಜಿ.ಪರಮೇಶ್ವರ್

    ದೇಶದ ಅಭಿವೃದ್ದಿಯಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದ್ದು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಸೃಷ್ಠಿಸುವ ಜವಾಬ್ದಾರಿ ಮಹಿಳೆಯರ ಮೇಲಿದ್ದು, ಮಹಿಳೆಯರು ದೇಶದಲ್ಲಿ ಪುರುಷನಿಗೆ ಸರಿ ಸಮನಾದ ಜವಾಬ್ದಾರಿ ಹೊರುತ್ತಿರುವುದು ಶ್ಲಾಘನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.

    ತಾಲ್ಲೂಕಿನ ಚನ್ನರಾಯನದುರ್ಗ ಗ್ರಾಮದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಕೊರಟಗೆರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪೋಷನ್ ಮಾಸಾಚರಣೆ ಅಂಗವಾಗಿ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಂಪ್ರದಾಯಿಕ ಆಹಾರ ಪದ್ದತಿ ಸಂರಕ್ಷಣೆ ಹಾಗೂ ಸುಸ್ಥಿರತೆ ಮತ್ತು ಭಾಗ್ಯಲಕ್ಷ್ಮೀ( ಸುಕನ್ಯ ಸಮೃದ್ದಿ) ಯೋಜನೆಯ ಪಾಸ್ ಪುಸ್ತಕಗಳ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯನ ಮೂಲಭೂತ ಸೌಕರ್ಯಗಳಿಗೆ ಭಾರತೀಯ ಸಂಸ್ಕೃತಿಯ ಸಂಪ್ರದಾಯಿಕ ಆಹಾರವು ಅತಿಮುಖ್ಯತೆಯನ್ನು ಪಡೆದಿದೆ, ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಆಹಾರ ಅತ್ಯಗತ್ಯ ಅದ್ದರಿಂದ ಶಕ್ತಿಯುತ ಆಹಾರ ಮತ್ತು ಸಮತೋಲನ ಆಹಾರದಿಂದ ಮಾನಸಿಕ, ದೈಹಿಕ, ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹಳ ಮುಖ್ಯವಾಗಿದ್ದು ಸ್ಥಳೀಯವಾಗಿ ದೊರೆಯುವಂತಹ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ತಿಳಿಸಿದ ಅವರು ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಜವಾಬ್ದಾರಿ ಮಹಿಳೆಯರದಾಗಿದ್ದು ಈ ಜವಾಬ್ದಾರಿಯನ್ನು ಮಹಿಳೆಯರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

    ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ಗರ್ಭಿಣಿಯರಿಗೆ ಪೌಷ್ಠಿಕಾಂಶವುಳ್ಳ ಆಹಾರವನ್ನು ಕೊಟ್ಟು ಅವರನ್ನು ಆರೋಗ್ಯವಂತರನ್ನಾಗಿ ಮಾಡುವ ಕಾರ್ಯ ಕ್ರಮದ ಯೋಜನೆ ಹಿಂದೆ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾರಿಗೊಳಿಸಿ ಅನುಷ್ಠಾನ ಗೊಳಿಸಿದ್ದು ಅದೇ ಕಾರ್ಯಕ್ರಮವನ್ನು ಈಗಿನ ಸರ್ಕಾರ ಪೋಷಣ್ ಅಭಿಯಾನ ಎಂಬ ನೂತನ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಿದೆ ಎಂದು ಮಾಹಿತಿ ನೀಡಿದ ಅವರು ಇಲಾಖೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅಪೌಷ್ಠಿಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಶ್ಲಾಘನೀಯ ಎಂದ ಶಾಸಕರು ಮಾಜಿ ಪ್ರಧಾನ ಮಂತ್ರಿಗಳಾಗಿದ್ದು ರಾಜೀವ್‍ಗಾಂಧಿರವರ ಅವಧಿಯಲ್ಲಿ ಮಹಿಳೆಯರಿಗೆ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಸಮರ್ಥರು ಎಂದು ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಕೆಲಸ ಮಾಡಲು ಶೇ.33 ರಷ್ಟು ಮೀಸ ಲಾತಿ ನೀಡಿದ ಹಿನ್ನೆಲೆಯಲ್ಲಿ ಪ್ರಸ್ಥುತ ಎಲ್ಲಾ ಮಹಿಳೆಯರು ಅಧಿಕಾರದಲ್ಲಿ ದೇಶದ ಅಭಿವೃದ್ದಿಯಲ್ಲಿ ಮುಖ್ಯಪಾತ್ರ ವಹಿಸುತ್ತಿದ್ದಾರೆ ಈ ಕೀರ್ತಿ ಮಾಜಿ ಪ್ರಧಾನಿ ರಾಜೀವ್‍ಗಾಂಧಿರವರಿಗೆ ಸಲ್ಲಬೇಕು, ಈ ಕಾರ್ಯಕ್ರಮ ಇನ್ನೂ ಹೆಚ್ಚು ಯಶಸ್ವಿಯಾಗಬೇಕಾದರೆ ಸರ್ಕಾರ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡೆಬೇಕು ಎಂದರು.

    ಕೊರಟಗೆರೆ ಕ್ಷೇತ್ರದ ಜನತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ಹಾಗೂ ಉಪಮುಖ್ಯಮಂತ್ರಿಯನ್ನಗಿ ಮಾಡಿದ ಕೀರ್ತಿ ಕ್ಷೇತ್ರದ ಜನತೆಗೆಗಿದ್ದು ಜನತೆಯ ಯಣ ತೀರಿಸುವ ಜವಾಬ್ದಾರಿಯಾಗಿದ್ದು ನಾನು ಹೇಳಿದಂತೆ ವಿಧಾನ ಸಭಾ ಕ್ಷೇತ್ರದ ಪತ್ರಿಯೊಂದು ಗ್ರಾಮದಲ್ಲೂ ಕನಿಷ್ಠ ಪಕ್ಷ ಅವಶ್ಯಕತೆಯಿರುವ ಒಂದು ಕೆಲಸವನ್ನಾದರೂ ಮಾಡಿರುವುದಾಗಿ ತಿಳಿಸಿದ ಅವರು ಇತಿಹಾಸ ಪ್ರಸಿದ್ದ ಪಡೆದ ಹಾಗೂ ಬ್ರಿಟನ್‍ನ ಲಂಡನ್ ಗ್ರಂಥಾಲಯದಲ್ಲಿ ಉಲ್ಲೆಖನ ವಿರುವ ಹಾಗೂ ಸಾವಿರಾರು ರಾಜರುಗಳು ಆಳ್ವಿಕೆ ಮಾಡಿರುವ ಚನ್ನರಾಯನದುರ್ಗದ ಗ್ರಾಮದಲ್ಲಿ ಪ್ರಸ್ತುತ ಸಿ.ಸಿ ರಸ್ತೆಗೆ 15 ಲಕ್ಷ ಅನುದಾನ ಹಾಗು 9 ಕೋಟಿ ರೂ ವೆಚ್ಚದಲ್ಲಿ ಸಿದ್ದರಬೆಟ್ಟ ರಸ್ತೆಯ ಅಭಿವೃಧ್ದಿ ಸೇರಿದಂತೆ ಇನ್ನಿತರ ಮೂಲಭೂತ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ತಮ್ಮ ಆಶ್ರೀರ್ವಾದಿಂದ ಹೆಚ್ಚಿನ ಅಭಿವೃದ್ದಿಯ ಯೋಜನೆಯ ಗುರಿಹೊಂದಿಲಾಗಿದೆ ಎಂದು ತಿಳಿಸಿದ ಅವರು ತಾಲೂಕಿನ ಗ್ರಾಮೀಣ ಮಕ್ಕಳ ಭವಿಷ್ಯದ ಅಭಿವೃಧ್ದಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಸುಸರ್ಜಿತ 6 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಉಪನಿದೇರ್ಶಕ ಶ್ರೀಧರ್ ಮಾತನಾಡಿ ಹದಿಯರಿಯದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಮಾನಸಿಕ, ದೈಹಿಕ, ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹಳ ಮುಖ್ಯವಾಗಿದ್ದು ಸ್ಥಳೀಯವಾಗಿ ದೊರೆಯುವಂತಹ ಪೌಷ್ಟಿಕ ಆಹಾರ ಪದಾರ್ಥಗಳಾದ ಸಿರಿ-ಧ್ಯಾನ್ಯ, ಹಸಿರುಸೊಪ್ಪು, ತರಕಾರಿ, ಹಣ್ಣುಗಳು, ಬೇಳೆಕಾಳು, ಮೊಳಕೆಕಾಳು, ಹಾಲು, ಮೊಟ್ಟೆ, ಸೇರಿದಂತೆ ಏಕದಳ ಮತ್ತು ದ್ವೀದಳ ಧಾನ್ಯಗಳ ಬಳಕೆ ಹೆಚ್ಚು ಸೇವಿಸುವುದರಿಂದ ದೈಹಿಕ ಮತ್ತು ಮಾಸನಿಕ ಬೆಳವಣಿಗೆ ವೃದ್ದಿ ಯಾಗಿ ಮಕ್ಕಳ ವಿದ್ಯಾಭ್ಯಾಸ ಗುಣ ಮಟ್ಟ ಉತ್ತಮವಾಗಿರುತ್ತದೆ, ಜೊತೆಗೆ ರೋಗ ನಿರೋಧಕ ಶಕ್ತಿ ವೃದ್ದಿಯಾಗಿ ರೋಗಗಳಿಂದ ರಕ್ಷಣೆ ಪಡೆಯಬಹುದು, ಪೌಷ್ಠಿಕ ಆಹಾರದ ಬಗ್ಗೆ ಜಾಗೃತರಾಗಿ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಅಪೌಷ್ಠಿಕತೆ ಮುಕ್ತ ಜೀನವ ನಡೆಸಬೇಕೆಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ದೊಡ್ಡಸಿದ್ದಯ್ಯ, ಕೊರಟಗೆರೆ ಸಿಡಿಪಿಓ ಅಂಬಿಕಾ, ಮೇಲ್ವಿಚಾರಕಿ ನಾಗರತ್ನಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರಾದ ಶಾಹಿದಾಖಾನಂ, ಲಕ್ಷ್ಮೀಕಾಂತ, ರಾಧಮ್ಮ, ಸಣ್ಣಮಸೀಯಪ್ಪ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಅರಕೆರೆ ಶಂಕರ್, ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ಕೃಷಿ ಸಹಾಯಕ ನಿದೇಶಕ ನಾಗರಾಜು, ಟಿಹೆಚ್‍ಓ ವಿಜಯ್‍ಕುಮಾರ್, ಎಇಇ ರವಿಕುಮಾರ್, ಡಾ.ಸಿದ್ದನಗೌಡ, ಸಮಾಜಕಲ್ಯಾಣಾಧಿಕಾರಿ ಉಮಾದೇವಿ, ಅನಂತರಾಜು, ಡಾ.ಆತ್ಮರಾಮ್, ಡಾ.ಭವ್ಯ, ಶೈಲಜಮ್ಮ,ಶಿಕ್ಷಕ ಹನುಮಂತರಾಯಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕೊರಟಗೆರೆ ಪಟ್ಟಣ ಪಂಚಾಯಿತಿ ‘ಪುರಸಭೆ’ಯಾಗಿ ಮೇಲ್ದರ್ಜೆಗೆ!

    November 8, 2025

    ಬೀದಿಬದಿ ವ್ಯಾಪಾರಸ್ಥರ ಸುರಕ್ಷತೆಗೆ ಕ್ರಮವಹಿಸುವಂತೆ ಸದಸ್ಯರ ಆಗ್ರಹ

    November 4, 2025

    ಕೊರಟಗೆರೆ ಬಸ್ ಗಾಗಿ ಪರದಾಟ:   ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ವಿರುದ್ಧ ಹೆಚ್ಚಾದ ಜನಾಕ್ರೋಶ

    November 4, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಲಂಚಕ್ಕೆ ಕೈಯೊಡ್ಡಿದ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತರ ಬಲೆಗೆ!

    November 11, 2025

    ತುಮಕೂರು: ಕಾಮಗಾರಿ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಕೇಳಿದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ತಿಪಟೂರು ವಿಭಾಗದ…

    ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ: ಅದ್ದೂರಿ ಕನ್ನಡ ರಾಜ್ಯೋತ್ಸವ

    November 11, 2025

    ತುಮಕೂರು | ಆರ್‌ ಎಸ್‌ ಎಸ್‌ ನಿಷೇಧಿಸಲು ಡಿಎಸ್ ಎಸ್  ಆಗ್ರಹ

    November 11, 2025

    ರಂಗಾಯಣ: ನ.17ರಿಂದ 21ರವರೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕೋತ್ಸವ!

    November 11, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.