ಕಾರವಾರ : ಗೋವಾಕ್ಕೆ ಅಕ್ರಮವಾಗಿ ಗೋ ಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಮಾಲು ಸಮೇತ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ ಚೆಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದ್ದು, ಮಹೇಂದ್ರ ಪಿಕಪ್ ಸಮೇತ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಅಳ್ನಾವರ್ ಮೂಲದ ಸಾದಿಕ್, ಇಲಿಯಾಸ್, ದಾವಲಮಲೀಕ್, ಖಾನಾಪುರ ಮೂಲ ಶಾಹಿದ್ ಹಾಗೂ ರಾಜಾಸಾಬ್ದ ಎಂದು ಗುರುತಿಸಲಾಗಿದೆ.
ಆರೋಪಿಗಳು 3,10,800 ರೂಪಾಯಿ ಮೌಲ್ಯದ 2,220 ಕೆ.ಜಿ. ಗೋಮಾಂಸ ಸಾಗಿಸುತ್ತಿದ್ದರು. ಈ ಸಂಬಂಧ ಜೋಯಿಡಾ ತಾಲೂಕಿನ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


