ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆಯ ಗ್ರಾಮ ದೇವತೆಗಳಾದ ಶ್ರೀ ವೀರಭದ್ರ ಸ್ವಾಮಿ, ಶ್ರೀ ಕೆಂಪಮ್ಮ ದೇವಿ, ಪ್ಲೇಗಿನಮ್ಮ ದೇವಿ, ಶ್ರೀ ಗೌರಮ್ಮ ಮತ್ತು ಗಣಪತಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಬಳಿಕ ಗೌರಮ್ಮ ಮತ್ತು ಗಣಪತಿ ಮೂರ್ತಿ ತೆಪ್ಪೋತ್ಸವದ ಮಾಡುವುದರ ಮೂಲಕ 15 ವರ್ಷಗಳ ನಂತರ ತುಂಬಿದ ಹಾಲ್ಕುರಿಕೆ ಅಮಾನಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಕಾರ್ಯಕ್ರಮದಲ್ಲಿ ಕೋವಿಯ ಮುಖಾಂತರವಾಗಿ ಅಂಬು ಹೊಡೆಯುವ ದೃಶ್ಯ ಗಮನ ಸೆಳೆಯಿತು. ಇದನ್ನು ನೋಡಲು 15 ರಿಂದ 20 ಹಳ್ಳಿಯಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು.
ಗಂಗಾ ಪೂಜೆ, ಮಡಿಲಕ್ಕಿ ಪೂಜೆ ಇನ್ನು ಹಲವು ಪೂಜೆಗಳನ್ನು ಭಕ್ತಿ ಭಾವದೊಂದಿಗೆ ಸಲ್ಲಿಸಲಾಯಿತು. ತೆಪ್ಪೋತ್ಸವದ ಮುಖಾಂತರವಾಗಿ ಗೌರಮ್ಮ ಮತ್ತು ಗಣಪತಿಯ ವಿಸರ್ಜನೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy