ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಹಿನ್ನೆಲೆಯಲ್ಲಿ ಮಾಯಸಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದಲ್ಲಿ ಚೌದರಿ ಟೀ ರಂಗಪ್ಪ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎನ್ನಾರ್ ಜಯರಾಮ್ ರವರ ನೇತೃತ್ವದಲ್ಲಿ ಮಾಯಸಂದ್ರ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು.
ಈ ಸಭೆಯಲ್ಲಿ ಚುಂಚನಗಿರಿಯಿಂದ ಆಗಮಿಸುವ ರಾಹುಲ್ ಗಾಂಧಿಯವರನ್ನು ಬರಮಾಡಿಕೊಳ್ಳಲು ಹಾಗೂ ಮಾಯಸಂದ್ರದಿಂದ ತುರುವೇಕೆರೆವರೆಗೂ ಪ್ರತಿ ಗೇಟ್ ನಲ್ಲಿ ಆಹಾರ ನೀರು ಹಣ್ಣುಗಳ ವಿತರಿಸುವ ಸ್ಟಾಲ್ ಗಳನ್ನು ಜವಾಬ್ದಾರಿಯೊಂದಿಗೆ ವಿತರಿಸುವ ಹೊಣೆಗಾರಿಕೆಯನ್ನು ಆಯಾ ಭಾಗದ ಕಾಂಗ್ರೆಸ್ ಮುಖ್ಯಸ್ಥರುಗಳಿಗೆ ವಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಕಾಂತರಾಜ್ ರವರು ಮಾತನಾಡಿ, ಕನಿಷ್ಠ ಮಾಯಸಂದ್ರ ಹೋಬಳಿಯಿಂದ ಸಾವಿರ ಜನ ಪಾದಯಾತ್ರೆಗಳನ್ನು ಕರೆತಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಕಾರ್ಯಕರ್ತರಲ್ಲಿ ಹಾಗೂ ಮುಖಂಡರುಗಳಲ್ಲಿ ಮನವಿ ಮಾಡಿಕೊಂಡರು.
ಸುಮಾರು 40 ಸಾವಿರ ಜನಕ್ಕೆ ಊಟ ತಿಂಡಿ ವ್ಯವಸ್ಥೆ, ಉಪಹಾರ ವ್ಯವಸ್ಥೆ, ನೀರು ಎಲ್ಲವನ್ನು ನೋಡಿಕೊಳ್ಳುವುದಾಗಿ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy