ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ರಾಮತೀರ್ಥ ನಗರದ ಕ್ರಿಕೆಟ್ ಮೈದಾನ ಹತ್ತಿರದಲ್ಲಿ ಬೆಳಗಾವಿ ನಗರಾಭಿವೃದ್ಧಿ ಯೋಜನೆಯಡಿಯಲ್ಲಿನ ರೂ. 450 ಲಕ್ಷಗಳ ಅನುದಾನದಲ್ಲಿ ಸಭಾ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಮತೀರ್ಥ ನಗರದಲ್ಲಿನ ರಹವಾಸಿಗಳ ಬೇಡಿಕೆಯಂತೆ ಬುಡಾ ಯೋಜನೆಯಡಿ ರೂ. 450 ಲಕ್ಷಗಳ ಅನುದಾನದಲ್ಲಿ ಬೃಹತ್ ಸಭಾ ಭವನ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ನೋಡಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರರಿಗೆ ಸೂಚನೆಯನ್ನು ನೀಡಿದರು.
ನಗರ ಸೇವಕರುಗಳಾದ ಹಣಮಂತ ಕೋಗಾಲಿ, ರಾಜಶೇಖರ ಡೋಣ , ಮಾಜಿ ಮಹಾಪೌರರಾದ ಎನ್. ಬಿ. ನಿರ್ವಾಣ , ಬುಡಾ ಕಾರ್ಯನಿರ್ವಾಹಕ ಅಭಿಯಂತರ ನಾಯಿಕ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಮ್. ವಿ. ಹಿರೇಮಠ, ಸಹಾಯಕ ಅಭಿಯಂತರ ಪ್ರಸನ್ನಕುಮಾರ, ಶಂಕರಗೌಡ ಪಾಟೀಲ, ಅಶೋಕ ಮುಗಬಸವ, ಭೂತೆ, ಮಹಾಂತೇಶ ವಕ್ಕುಂದ, ವಿಲಾಸ ಕೇರೂರ, ಕೆದಾರ ಜೊರಾಪೂರ, ಸಂತೊಷ ದೇಸಾಯಿ, ನವೀನ ಹಿರೇಮಠ, ಸುರೇಶ ಯಾಧವ, ಸುರೇಶ ಉರಬಿನಟ್ಟಿ, ಆನಂದ ದೇಸಾಯಿ, ಮೃತ್ಯುಂಜಯ ಕುಲಕರ್ಣಿ , ಸಂತೋಷ ಅನವರ್ಡೆ ಗುತ್ತಿಗೆದಾರ ಪಿ. ಆರ್. ನಂದಗಾವಿ ಹಾಗೂ ಇತರ ರಾಮತೀರ್ಥ ನಗರ ರಹವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy