ಸರಗೂರು: ಮಳೆಯಿಂದಾಗಿ ಹಾನಿಯಾಗಿದ್ದ ಮನೆಗಳ ಪರಿಹಾರದ ಫಲಾನುಭವಿಗಳ ಪಟ್ಟಿಯಿಂದ ಸುಮಾರು 600 ಫಲಾನುಭವಿಗಳ ಹೆಸರನ್ನು ಏಕಾಏಕಿ ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸರಗೂರು ನೆರೆ ಸಂತ್ರಸ್ತರ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ತಾಲ್ಲೂಕಿನ ಕಳೆದ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸರಗೂರು ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಾರ್ವಜನಿಕರು ಮನೆ ಕಳೆದುಕೊಂಡಿದ್ದರು. ಆದರೆ, ಮನೆ ಪರಿಹಾರದ ಫಲಾನುಭವಿಗಳ ಪಟ್ಟಿಯಿಂದ 600 ಫಲಾನುಭವಿಗಳ ಹೆಸರನ್ನು ಕೈ ಬಿಡಲಾಗಿದೆ.
ಪಟ್ಟಣದ ತಾಲ್ಲೂಕು ಕಛೇರಿಯ ಮುಂಭಾಗದ ಮೈದಾನದಲ್ಲಿ ನೆರೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಜಮಾವಣೆಗೊಂಡ ಫಲಾನುಭವಿಗಳು ಸಮಸ್ಯೆ ಬಗೆಹರಿಸದಿದ್ದಲ್ಲಿ ಅ.10ರಿಂದ ನಿರಂತರ ಧರಣಿ ನಡೆಸಲು ತೀರ್ಮಾನ ಕೈಗೊಂಡರು.
ಕಳೆದ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಾವಿರಾರು ಮನೆಗಳು ಹಾನಿಗೊಳಗಾಗಿದ್ದವು. ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು ಪರಿಶೀಲನೆ ನಡೆಸಿ ಮನೆಯ ಪರಿಹಾರಕ್ಕಾಗಿ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಆರ್.ಜಿ.ಎಚ್.ಸಿ.ಎಲ್ ವೆಬ್ ಸೈಟ್ ನಲ್ಲಿ ತಾಲ್ಲೂಕು ಆಡಳಿತದ ಮೂಲಕವೇ ಪರಿಹಾರಕ್ಕಾಗಿ ಫಲಾನುಭವಿಗಳ ಹೆಸರನ್ನು ಸೇರಿಸಲಾಗಿತ್ತು. ಆದರೆ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿದ ವರದಿಯಲ್ಲಿ ಲೋಪವಿದೆ ಎಂದು ದೋಷಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಪುನರ್ ಪರಿಶೀಲನೆ ನಡೆಸಲಾಗಿತ್ತು. ಆದರೆ ತನಿಖಾ ತಂಡವು ಮನೆ ಕಳೆದುಕೊಂಡ ಸುಮಾರು 600 ಸಂತ್ರಸ್ತರ ಹೆಸರನ್ನು ಪಟ್ಟಿಯಿಂದ ಏಕಾಏಕಿ ಕೈ ಬಿಟ್ಟಿದ್ದು, ಇದರಿಂದಾಗಿ ನೆರೆ ಸಂತ್ರಸ್ತರಿಗೆ ಸರ್ಕಾರದ ಪರಿಹಾರವು ಕೈತಪ್ಪುವಂತಾಗಿದೆ ಎಂದು ಮನೆ ಕಳೆದುಕೊಂಡ ಸಂತ್ರಸ್ತರು ಆರೋಪಿಸಿದ್ದಾರೆ.
ಇದೇ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮ್ ಆದ್ಮಿ ಪಕ್ಷದ ತಾಲ್ಲೂಕು ಉಸ್ತುವಾರಿ ಗ್ರಾಮೀಣ ಮಹೇಶ್, ಮಾತನಾಡಿದರು.
ಸಭೆಯಲ್ಲಿ ತಾಲ್ಲೂಕು ನೆರೆಸಂತ್ರಸ್ಥರ ಪರವಾಗಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವಲಿಂಗಯ್ಯ ಯಶವಂತಪುರ, ರಮೇಶ್ ಲಂಕೆ, ಶಿವರಾಜು, ಅರಸು, ಪ್ರಕಾಶ್ ಹಾದನೂರು, ಎಎಪಿ ತಾಲ್ಲೂಕು ಅಧ್ಯಕ್ಷರಾದ ಗ್ರಾಮೀಣಾ ಮಹೇಶ್, ದಸಂಸ ಲಕ್ಷ್ಮಣ್, ಎಂ.ಸಿ.ತಳಲು, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ವೆಂಕಟರಾಮು, ಮುಳ್ಳೂರು ಗ್ರಾ.ಪಂ. ಸದಸ್ಯರು ಶಿವಚನ್ನ, ಪುಟ್ಟಸ್ವಾಮಿ ಹಂಚೀಪುರ ಗ್ರಾಪಂ ಸದಸ್ಯ ನಾಗರಾಜ್, ಹೆಗ್ಗನೂರು ಗ್ರಾಪಂ ಸದಸ್ಯರು ಲೋಕೇಶ್, ನಾಗೇಂದ್ರ, ವಿನೋದ್, ರವಿಕುಮಾರ್ ಹಾದನೂರ, ಆರ್ ಸಿಬಿ ಹೋಟೆಲ್ ಮಾಲೀಕ ಬೆಟ್ಟನಾಯಕ, ಸಾಗರೆಶಂಕರ್, ಇಂದ್ರಕುಮಾರ್ ಮತ್ತಿತರರು ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


