ಬೆಳಗಾವಿ: ನಗರದಲ್ಲಿ ಅರಣ್ಯ ಇಲಾಖೆ ವತಿಯಿಂದ 68ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ನಿಮಿತವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚವ್ಹಾಣ್ ಅವರು ಸೈಕಲಿಂಗ್ ಸ್ಪರ್ಧೆಗೆ ಚಾಲನೆ ನೀಡಿದರು. ಬೆಳಗಾವಿ ಅರಣ್ಯ ವೃತ್ತದಿಂದ ರಾಣಿ ಚೆನ್ನಮ್ಮ ವನ್ಯಜೀವಿ ಬುತರಾಮನಹಟ್ಟಿ ಉದ್ಯಾನದದಿಂದ 14 ಕಿಲೋ ಮೀಟರ್ ಸೈಕಲ್ ಮೂಲಕ ಸಂಚಾರಿಸಿ ವನ್ಯಜೀವಿ ಸಂರಕ್ಷಣೆ ಮತ್ತು ವನ್ಯಜೀವಿಯ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸ್ಪರ್ಧೆಯಲ್ಲಿ 12 ವರ್ಷದ ಮಕ್ಕಳಿಂದ 60 ವರ್ಷದ ವೃದ್ಧರದವರೆಗೂ ಸೈಕ್ಲಿಂಗ್ ನಲ್ಲಿ ಭಾಗವಹಿಸಿದ್ದರು. ಸುಮಾರು 65 ಜನ ಈ ಸ್ಪರ್ಧೆಯಲ್ಲಿದ್ದರು. ಆರ್ ಎಫ್ ಓ ಶ್ರೀನಾಥ್ ಕಡೋಲ್ಕರ , ಪ್ರಕಾಶ್ ಸುನಿವಾಗಲೇಕರ್, ಸಂಜು ದೇಶಪಾಂಡೆ, ಇನಾಮ್ದಾರ್ ರಾಜು ನಾಯಕ್ ಇತರರು ಸ್ಪರ್ಧೆಯಲ್ಲಿ ಭಾಗವಹಿಸಿ ವನ್ಯಜೀವಿ ಸಂರಕ್ಷಣೆ ಮತ್ತು ವನ್ಯಜೀವಿಯ ಜನಜಾಗೃತಿ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಕಲ್ಲೋಳ್ಕರ್, ಸಹಾಯಕ ಸಂರಕ್ಷಣಾಧಿಕಾರಿ ಬೆಳಗಾವಿ ಉಪ ವಿಭಾಗ ಎಂ.ಬಿ. ಕುಸನಾಳ, ಸಹಾಯಕ ಸಂರಕ್ಷಣಾಧಿಕಾರಿ ನಾಗರಗಾಳಿ, ಶಿವರುದ್ರಪ್ಪ ಕಬಡಗಿ,ವಲಯ ಅಧಿಕಾರಿಗಳಾದ ಬಸವರಾಜ್ ವಾಳದ್, ರತ್ನಾಕರ್ ಒಬ್ಬನವರ್, ಪುರುಷೋತ್ತಮ್ ರಾಜ್, ಉಪವಲಯ ಅಧಿಕಾರಿಗಳು ಅರಣ್ಯ ರಕ್ಷಕರು ಅರಣ್ಯ ವೀಕ್ಷಕರು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


