ಇಸ್ರೇಲ್ ನಲ್ಲಿ ಭಾರತದ ಯುವಕನನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಲಾಗಿತ್ತು. ಇವರೆಲ್ಲರೂ 13 ರಿಂದ 15 ವರ್ಷದೊಳಗಿನವರು. 18 ವರ್ಷದ ಯೊಯೆಲ್ ಲೆಹಿಂಗ್ಹಾಲ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಚಾಕು ಹೊಡೆದಾಟಕ್ಕೆ ಬಲಿಯಾಗಿದ್ದಾನೆ.
ಇಸ್ರೇಲ್‌ನ ಕಿರ್ಯಾತ್ ಸೊಮೊನಾ ನಗರದಲ್ಲಿ ಈ ಘಟನೆ ನಡೆದಿದೆ. ಯೊಯೆಲ್ ಒಂದು ವರ್ಷದ ಹಿಂದೆ ತನ್ನ ಕುಟುಂಬದೊಂದಿಗೆ ಭಾರತದಿಂದ ಇಸ್ರೇಲ್‌ಗೆ ವಲಸೆ ಬಂದಿದ್ದ. ಅವರು ನೋಫ್ ಹಗಲಿಲ್ ಎಂಬ ಊರಿನಲ್ಲಿದ್ದಾರೆ.
ಹುಟ್ಟುಹಬ್ಬದ ಸಮಾರಂಭದಲ್ಲಿ ಸುಮಾರು 20 ಯುವಕರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಯೊಯೆಲ್ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಬಿನೈ ಮಿನಾಶೆ ಯಹೂದಿ ಸಮುದಾಯವು ಭಾರತದ ಮಣಿಪುರ ಮತ್ತು ಮಿಜೋರಾಂ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಗುಂಪಿಗೆ ಸೇರಿದ ಜನರು ಕಳೆದ ಎರಡು ದಶಕಗಳಿಂದ ಇಸ್ರೇಲ್‌ಗೆ ವಲಸೆ ಬರುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy