ವಿಜಯಪುರ: ರಾಜಕೀಯವಾಗಿ ನನ್ನನ್ನು ಮುಗಿಸಲು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮಾತು ಕೇಳಿ ಕೆಲ ಮಾಧ್ಯಮಗಳು ವ್ಯವಸ್ಥಿವಾಗಿ ಅಪಪ್ರಚಾರ ಮಾಡಿದವು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ನನ್ನನ್ನು ಮುಗಿಸಲು, ಬಿಜೆಪಿ ಪಕ್ಷದ ಸನ್ಮಾನ್ಯ ಉಪಾಧ್ಯಕ್ಷ ವಿಜಯೇಂದ್ರನ ಮಾತು ಕೇಳಿ, ಕೊಟ್ಟ ಪ್ರಸಾದ ಸ್ವೀಕರಿಸಿ, ಕೇಂದ್ರದವರು 2500 ಕೋಟಿ ರೂ. ಕೇಳಿದ್ದಾರೆಂದು ನನ್ನ ಝೀರೋ ಮಾಡುವುದಕ್ಕಾಗಿ ಕೆಲ ದೃಶ್ಯಮಾಧ್ಯಮಗಳು ವ್ಯವಸ್ಥಿವಾಗಿ ಅಪಪ್ರಚಾರ ಮಾಡಿದವು ಎಂದರು.
ದೆಹಲಿಯಿಂದ ಈಗಲೂ ಓರ್ವ ಸ್ವಾಮೀಜಿ 1,500 ಕೋಟಿ ರೂ. ಕೂಡಿಸಿಕೊಂಡು ದೆಹಲಿ ಬನ್ನಿ. ನಿಮ್ಮನ್ನು ಜೆ.ಪಿ.ನಡ್ಡಾ, ಮೋದಿ ಅವರ ಭೇಟಿಗೆ ಸಮಯ ನಿಗದಿ ಮಾಡುತ್ತೇನೆ ಅಂತೆಲ್ಲ ಹೇಳುತ್ತಾರೆ. ಇಂಥದ್ದನ್ನೆಲ್ಲ ನಂಬಬೇಡಿ ಎಂದಿದ್ದೇನೆ. ಇಂಥವರ ಮಾತು ನಂಬಿಕೊಂಡು ಹಲವರು ಭಾರಿ ಪ್ರಮಾಣದ ಹಣ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


