ಬೆಳಗಾವಿ: ಯುವತಿ ಅನುಮಾನಾಸ್ಪದ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ತಬಸ್ಸುಮ್ ಸವದತ್ತಿ(19) ಮೃತ ಯುವತಿ.
ಬೆಂಗಳೂರಿನಲ್ಲಿ ಕಾಲ್ ಸೆಂಟರ್ನಲ್ಲಿ ತಬಸ್ಸುಮ್ ಕೆಲಸ ಮಾಡುತ್ತಿದ್ದಳು. ನಿನ್ನೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಅಪರಿಚಿತ ಯುವಕ ದಾಖಲಿಸಿದ್ದ. ಈ ಬಗ್ಗೆ ದೂರು ನೀಡಿ ಎಂದಿದ್ದಕ್ಕೆ ಯುವತಿಯ ಮೊಬೈಲ್ ನೊಂದಿಗೆ ಯುವಕ ಪರಾರಿಯಾಗಿದ್ದಾನೆ.
ಪೋಷಕರು ಆಸ್ಪತ್ರೆಗೆ ಬಂದಾಗ ತಬಸ್ಸುಮ್ ನಿತ್ರಾಣ ಸ್ಥಿತಿಯಲ್ಲಿದ್ದಳು. ಯುವತಿಯ ತಲೆಯ ಹಿಂಬದಿಯಲ್ಲಿ, ಮೈಮೇಲೆ ಸಿಗರೇಟನಿಂದ ಸುಟ್ಟಿದ ಗಾಯದ ಗುರುತು ಪತ್ತೆಯಾಗಿವೆ.
ಹೆಚ್ಚಿನ ಚಿಕಿತ್ಸೆಗೆ ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತಬಸ್ಸುಮ್ ಸಾವನ್ನಪ್ಪಿದ್ದಾಳೆ. ಮಗಳನ್ನು ಕೊಲೆ ಮಾಡಿದ್ದಾರೆಂದು ಮೃತ ತಬಸ್ಸುಮ್ ತಂದೆ ಇರ್ಷಾದ್ ಅಹ್ಮದ್ ಆರೋಪ ಮಾಡಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


