ಜೆಡಿಎಸ್ ಜೊತೆ ಮುನಿಸಿಕೊಂಡು ಪಕ್ಷದ ತೊರೆಯಲು ಮುಂದಾಗಿದ್ಧ ಶಾಸಕ ಜಿಟಿ ದೇವೇಗೌಡರನ್ನ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಖುದ್ಧು ಅಖಾಡಕ್ಕಿಳಿದು ಮನವೊಲಿಸಿದ್ದಾರೆ.
ಈ ಮಧ್ಯೆ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನಡೆಸಿದ ಸಂದಾನ ಯಶ್ವಸಿಯಾಗಿದ್ದು ಜಿಟಿ ದೇವೇಗೌಡರು ಜೆಡಿಎಸ್ ನಲ್ಲೇ ಉಳಿದಿದ್ದಾರೆ. ಇನ್ನೂ ಮೈಸೂರು ಚುನಾವಣಾ ಉಸ್ತುವಾರಿಯನ್ನ ಜಿ.ಟಿ ದೇವೇಗೌಡರಿಗೆ ನೀಡಲಾಗಿದೆ.
ಈ ನಡುವೆ ಇಂದು ಚಾಮುಂಡಿ ಬೆಟ್ಟದಲ್ಲಿ ಶಾಸಕ ಜಿ.ಟಿ ದೇವೇಗೌಡರು ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ್ದಾರೆ ಎನ್ನಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡರು, ಹುಣಸೂರು ಕ್ಷೇತ್ರದಿಂದ ಹರೀಶ್ ಗೌಡ, ಕೆಆರ್ ನಗರ ಶಾಸಕ ಸಾ.ರಾ ಮಹೇಶ್. ಪಿರಿಯಾಪಟ್ಟಣ ಕೆ.ಮಹದೇವ್ , ಟಿ.ನರಸೀಪುರದಿಂದ ಅಶ್ವಿನ್, ಹೆಚ್.ಡಿ ಕೋಟೆಯಿಂದ ಜಯಪ್ರಕಾಶ್ ಸ್ಪರ್ಧೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


