ಕೊರಟಗೆರೆ: ಪಟ್ಟಣದ ಕಾಮಧೇನು ಮೀಟಿಂಗ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಮಾನ್ಯವರ್ ಕಾನ್ಷೀರಾಂ ಜೀ ಅವರ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಮಾನ್ಯವಾರ್ ಕಾನ್ಷೀರಾಮ್ ಅವರಿಗೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಕೊರಗೆರೆ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಂವಿಧಾನದ ಬಗ್ಗೆ ಮತ್ತು ದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಿ ಒಂದು ಗಂಟೆಗಳ ಕಾಲ ಅಧ್ಯಯನ ಶಿಬಿರವನ್ನು ಆಯೋಜಿಸುವ ಮೂಲಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಡಾ. ನಾಗಮೋಹನ್ ದಾಸ್ ರಚನೆಯ ಸಂವಿಧಾನ ಪುಸ್ತಕವನ್ನು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.
ನಂತರ ರಾಜ್ಯ ಕಮಿಟಿಯ ಮತ್ತು ಜಿಲ್ಲಾ ಕಮಿಟಿಯ ಮುಖಂಡರುಗಳ ನೇತೃತ್ವದಲ್ಲಿ ತುಮಕೂರು ಗ್ರಾಮಾಂತರ ಬಹುಜನ ಸಮಾಜ ಪಾರ್ಟಿಯ ಘಟಕ ಸ್ಥಾಪನೆ ಮಾಡಲಾಯಿತು..
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ, ಸಂವಿಧಾನದ ಮಹತ್ವ ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶದ ನಾಗರಿಕರು ತಿಳಿಯಲೇ ಬೇಕಾಗಿದೆ ಇತ್ತೀಚಿನ ದಿನಗಳಲ್ಲಿ ಸಂವಿಧಾನ ವಿರೋಧಿಗಳು ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಸಂವಿಧಾನ ವಿರೋಧಿಗಳಿಂದ ದೇಶದ ಪ್ರಜ್ಞಾವಂತ ನಾಗರಿಕರು ಜಾಗೃತರಾಗಿರಬೇಕು. ಅಲ್ಲದೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ತುಂಬಾ ಎಚ್ಚರಿಕೆ ವಹಿಸಿ ಮತ ನೀಡಬೇಕು ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೀಸಲಾತಿ ಕ್ಷೇತ್ರದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ದಲಿತಪರ ಹೋರಾಟವನ್ನ ಮಾಡದೇ ದಲಿತರ ಕಷ್ಟ ಸುಖಗಳಿಗೆ ಭಾಗಿಯಾಗದೆ ಚುನಾವಣೆ ಬರುತ್ತಿದ್ದಂತೆ ಹೊರಗಿನಿಂದ ದಂಡುದಂಡೆ ಬಂದು ನಾನೇ ಅಭ್ಯರ್ಥಿ ಎಂದು ಇತ್ತೀಚಿನ ದಿನಗಳಲ್ಲಿ ನವರಂಗಿ ಆಟ ಶುರು ಮಾಡಿದ್ದಾರೆ ಎಂದರು.
ಸರ್ಕಾರದ ಎಲ್ಲಾ ಮೀಸಲಾತಿ ಇವರ ಕುಟುಂಬಕ್ಕೆ ಬೇಕಾ IAS ಇವರಿಗೆ ಬೇಕು, ಮೆಡಿಕಲ್ ಕಾಲೇಜು ಇವರಿಗೆ ಬೇಕು,ಕೊನೆಗೆ ಶಾಸಕರು ಕೂಡ ಇವರೇ ಆಗಬೇಕಾ ಎಂದು ಪ್ರಶ್ನಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಅಂತ ಹೇಳಿಕೊಂಡು ಬಂದಿರುವ ವ್ಯಕ್ತಿ ಅಧಿಕಾರದಲ್ಲಿ ಇದ್ದಾಗ ಕೊರಟಗೆರೆ ಮೀಸಲು ಕ್ಷೇತ್ರದ ಜನರಿಗೆ, ದಲಿತ ಸಮುದಾಯಕ್ಕೆ ಏನು ಮಾಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೈಡ್ರಾಮಾ ಶುರು ಮಾಡಿರೋದೆ ಇವರ ಸಾಧನೆನಾ. ಐದಿನೈದು ವರ್ಷ ಕಳೆದರು ಮೀಸಲು ಕ್ಷೇತ್ರದಲ್ಲಿ ಯಾವುದೇ ದಲಿತರಿಗೆ ವಿಶೇಷ ಅನುದಾನ ತಂದಿಲ್ಲ, ನಿರುದ್ಯೋಗ ನಿವಾರಣೆಗೆ ಒತ್ತು ನೀಡಲಿಲ್ಲ, ಸರಿಯಾದ ಒಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಿಲ್ಲ. ದಲಿತರೇ ಹೆಚ್ಚು ಇರುವ ಕ್ಷೇತ್ರದಲ್ಲಿ ಕನಿಷ್ಟ ಒಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕೂಡ ಯಾರಿಂದಲೂ ಮಾಡಿಸಲಾಗಿಲ್ಲ. ಪಕ್ಕದ ತಾಲ್ಲೂಕು ನೋಡಿದರೆ ನಾಚಿಕೆ ಆಗುತ್ತೆ. ಇದು ನಮ್ಮ ದುರಂತ. ಮತದಾರರೇ ಜಾಗೃತವಾಗಬೇಕು ಮುಂದಿನ ದಿನಗಳಲ್ಲಿ ಸಂವಿಧಾನ ಉಳಿವಿಗೆ ಬಹುಜನರ ಉಳಿವಿಗಾಗಿ ಬಹುಜನರ ಪಕ್ಷಕ್ಕೆ ಬೆಂಬಲ ನೀಡಿ. ಇತ್ತೀಚೆಗೆ ಅಭ್ಯರ್ಥಿ ಎಂದು ಬರುತ್ತಿರುವವರಿಗೆ ಪ್ರಮೋಷನ್ ಕೊಡಿಸುವುದಾಗಿ ಹಾಗೂ ಗುತ್ತಿಗೆದಾರರಿಗೆ ಕೆಲಸ ಕೊಡುವುದಾಗಿ ಮುಂಗಡವಾಗಿ ಹಣ ಪಡೆದು ಸಾಲು ಸಾಲು ಹಗರಣ ವೆಸಗಿರವವರ ಬಂಡವಾಳ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ದಾಖಲೆಗಳೊಂದಿಗೆ ಸಾಕ್ಷಿ ಸಮೇತ ಬಿಡುಗಡೆ ಮಾಡುವೆ ಎಂದು ಬಿಎಸ್ಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಜಟ್ಟಿ ಅಗ್ರಹಾರ ನಾಗರಾಜು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಗುರುಮೂರ್ತಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಟ್ಟಿ ಅಗ್ರಹಾರ ನಾಗರಾಜು ಅವರ ಸಾರಥ್ಯದಲ್ಲಿ ಉತ್ತಮ ಪಕ್ಷ ಸಂಘಟನೆಯಾಗುತ್ತಿದ್ದು, ದಿನೇ ದಿನೇ ಯುವಕರ ದಂಡೇ ಹರಿದುಬರುತ್ತಿದೆ. ಇಂದು ಹಲವು ಯುವಕರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷ ತೊರೆದು ಬಹುಜನರ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಜೆಟ್ಟಿ ಅಗ್ರಹಾರ ನಾಗರಾಜುಗೆ ಇನ್ನೂ ಹೆಚ್ಚಿನ ಶಕ್ತಿ ಬಂದಂತೆ ಕಾಣುತ್ತಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ದಲಿತ, ಅಲ್ಪಸಂಖ್ಯಾತ, ಮುಸ್ಲಿಂ, ಕ್ರೈಸ್ತರ ಮೇಲೆ ಉದ್ದೇಶ ಪೂರ್ವಕವಾಗಿ ದೌರ್ಜನ್ಯ ನಡೆಯುತ್ತಲೆ ಇದೆ. ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಅವರು ಇಪ್ಪತ್ತು ಪರ್ಸೆಂಟ್ ಕಮಿಷನ್ ಪಡೆದರೆ, ಇವರು ನಲವತ್ತು ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಅಷ್ಟೇ. ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಬಹುಜನ ಸಮಾಜ ಪಾರ್ಟಿ ಉತ್ತಮವಾದ ಖಾತೆ ತೆರೆದಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಗುರುಮೂರ್ತಿ, ಶೂಲಯ್ಯ,ಕೊರಟಗೆರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜೆಟ್ಟಿ ಅಗ್ರಹಾರ ನಾಗರಾಜು,ಜಿಲ್ಲಾ ಅಧ್ಯಕ್ಷ ರಾಜಸಿಂಹ, ಪ್ರದಾನ ಕಾರ್ಯದರ್ಶಿ ರಂಗಧಾಮಯ್ಯ,ತುಮಕೂರು ಗ್ರಾಮಾಂತರ ಅಧ್ಯಕ್ಷ ಅಯ್ಯನಪಾಳ್ಯ ಶ್ರೀನಿವಾಸ್,ಜಿಲ್ಲಾ ಉಪಾಧ್ಯಕ್ಷ ಮಂಜುನಾಥ,ಸಣ್ಣಭೂತಣ್ಣ, ಪಾವಗಡ ಹನುಮಂತರಾಯಪ್ಪ, ಅರುಣ್,ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ,ಶಿಲ್ಪಾ ನಾಗರಾಜು ಇನ್ನಿತರೆ ನೂರಾರು ಯುವಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು..
ವರದಿ: ಮಂಜುಸ್ವಾಮಿ, ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz