ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯಾದ್ಯಂತ 10,889 ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿ ವರ್ಧಕ ಬಳಕೆಗೆ ಪರವಾನಗಿ ನೀಡಿದೆ.
ರಾಜ್ಯ ಸರ್ಕಾರವು ಧ್ವನಿವರ್ಧಕ ಬಳಕೆ ಕುರಿತಂತೆ ಅರ್ಜಿಗಳನ್ನು ಪರಿಶೀಲನೆ ಪೂರ್ಣಗೊಳಿಸಿದ್ದು, ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕಗಳ ಬಳಕೆಗೆ 450 ರೂ.ಶುಲ್ಕ ವಿಧಿಸಲಾಗಿದೆ.
ರಾಜ್ಯದಲ್ಲಿ 10,889 ಕ್ಕೂ ಹೆಚ್ಚು ಮಸೀದಿಗಳು ಸೇರಿದಂತೆ ಮಂದೀರ, ಚರ್ಚ್ ಗಳ 17,850 ಧ್ವನಿವರ್ಧಕಗಳ ಬಳಕೆಗೆ ಪರವಾನಗಿ ನೀಡಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಧ್ವನಿವರ್ಧಕ ಪರವಾನಗಿಗಳು 1,841 ಆಗಿದ್ದು, ಇದರಲ್ಲಿ ಮಸೀದಿಗಳು, ದೇವಾಲಯಗಳು, ಚರ್ಚ್ಗಳು ಮತ್ತು ರೆಸ್ಟೋರೆಂಟ್ಗಳು ಸೇರಿವೆ 744 ಧ್ವನಿವರ್ಧಕ ಪರವಾನಗಿ ಹೊಂದಿರುವ ವಿಜಯಪುರದಲ್ಲಿ ಅತಿ ಹೆಚ್ಚು ಮಸೀದಿಗಳಿವೆ.
ಈ ವರ್ಷದ ಆರಂಭದಲ್ಲಿ, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಬೆಳಿಗ್ಗೆ 6 ಗಂಟೆಯ ಮೊದಲು ಧ್ವನಿವರ್ಧಕಗಳನ್ನು ಬಳಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಮಸೀದಿಗಳು ಉಲ್ಲಂಘಿಸಿವೆ ಎಂದು ಬಲಪಂಥೀಯ ಸಂಘಟನೆಗಳು ಆರೋಪಿಸಿದ್ದವು.
ಈ ಒತ್ತಡಕ್ಕೆ ಮಣಿದ ಬಿಜೆಪಿ ಸರ್ಕಾರ ಈ ವರ್ಷದ ಮೇ ತಿಂಗಳಲ್ಲಿ ಸುತ್ತೋಲೆ ಹೊರಡಿಸಿ, ಎಲ್ಲ ಧ್ವನಿವರ್ಧಕ ಬಳಕೆದಾರರಿಗೆ ಲಿಖಿತ ಅನುಮತಿ ಪಡೆಯುವಂತೆ ಸೂಚಿಸಿತ್ತು. ಪರವಾನಗಿಗಳನ್ನು ನೀಡಲು ಸಮಿತಿಯನ್ನು ರಚಿಸಲಾಗಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


