ಡೆಂಘ್ಯೂ ರೋಗಿಗಳಿಗೆ ನಕಲಿ ರಕ್ತದ ಪ್ಲೆಟೆಟ್ ಮತ್ತು ಪ್ಲಾಸ್ಮಾ ಮಾರುತ್ತಿದ್ದ 10 ಜನರ ಗ್ಯಾಂಗ್ ಅನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮೂಸಂಬಿ ಜ್ಯೂಸ್ ಡ್ರಿಪ್ ಹಾಕಿದ್ದರಿಂದ ಡೆಂಘ್ಯೂ ರೋಗಿ ಮೃತಪಟ್ಟ ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ನಕಲಿ ರಕ್ತದ ಪ್ಲೇಟೆಟ್ ಮತ್ತು ಪ್ಲಾಸ್ಮಾ ಮಾರುತ್ತಿದ್ದ 10 ಜನರನ್ನು ಬಂಧಿಸಲಾಗಿದೆ.
ನಕಲಿ ರಕ್ತ ಇದು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದರೆ ಇದು ಮೂಸಂಬಿ ಜ್ಯೂಸ್ ಎಂಬುದು ಸಾಬೀತಾಗಿಲ್ಲ. ಇದು ಏನು ಎಂಬುದು ಪ್ರಯೋಗದ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆಂಘ್ಯೂ ಕಾಯಿಲೆಗೆ ಇದು ಪ್ಲೆಟೆಟ್ ನೀಡುತ್ತದೆ ಎಂದು ಬಂಧಿಸಲಾದ ಆರೋಪಿಗಳು ವಿಚಾರಣೆ ವೇಳೆ ಪಟ್ಟು ಹಿಡಿದಿದ್ದಾರೆ.ನಿಖರ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದು, ಪ್ಲಾಸ್ಮಾ ಹಾಗೂ ಪ್ಲೆಟೆಟ್ ಎನ್ನಲಾದ ಪ್ಯಾಕೆಟ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz