ಬೆಳಗಾವಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅಂಗಡಿ ಮಾಲೀಕರೊಬ್ಬರು ಹಚ್ಚಿದ ಪಟಾಕಿ ಕಿಡಿ ಸಿಡಿದು ಕುಶನ್ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾದ ಘಟನೆ ಕಿತ್ತೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.
ಕಿತ್ತೂರು ಪಟ್ಟಣದ ನಿವಾಸಿ ಶಬ್ಬೀರ್ ಬೀಡಿ ಎಂಬುವವರಿಗೆ ಸೇರಿದ ಅಂಗಡಿಗೆ ಬೆಂಕಿ ಬಿದ್ದಿದೆ. ಪಟಾಕಿ ಕಿಡಿ ಸಿಡಿಯುತ್ತಿದ್ದಂತೆ ಧಗಧಗನೇ ಕುಶನ್ ಅಂಗಡಿ ಹೊತ್ತಿ ಉರಿದಿದ್ದು, ಅಂದಾಜು 3 ಲಕ್ಷ ಮೌಲ್ಯದ ಕುಶನ್, ಪೀಠೋಪಕರಣ ಬೆಂಕಿಗೆ ಆಹುತಿಯಾಗಿವೆ. ನಿನ್ನೆ ದೀಪಾವಳಿ ನಿಮಿತ್ತ ಶಬ್ಬೀರ್ ಬೀಡಿ ಅಂಗಡಿ ಮಾಲೀಕರು ದೀಪಾವಳಿ ಪೂಜೆ ಮಾಡಿದ್ದಾರೆ.
ಬಳಿಕ ಪಟಾಕಿ ಸಿಡಿಸಲು ಮುಂದಾದಾಗ ಅದರ ಕಿಡಿ ಪಕ್ಕದ ಕುಶನ್ ಅಂಗಡಿಗೆ ವ್ಯಾಪಿಸಿದೆ. ಬೆಂಕಿ ನಂದಿಸಲು ಹೋದ ಶಬ್ಬೀರ್ ಕೈ, ಕಾಲು ದೇಹದ ಇತರ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


