nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು

    November 12, 2025

    ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ

    November 12, 2025

    ಕೂಲಿ ಕೊಡದೇ ಗಾರ್ಮೆಂಟ್ಸ್‌ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

    November 12, 2025
    Facebook Twitter Instagram
    ಟ್ರೆಂಡಿಂಗ್
    • ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು
    • ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ
    • ಕೂಲಿ ಕೊಡದೇ ಗಾರ್ಮೆಂಟ್ಸ್‌ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
    • ಸರಗೂರು |  ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ
    • ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ
    • ಕರ್ತವ್ಯ ಲೋಪ: ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ, ಕಾಡುಪ್ರಾಣಿಗಳ ಹಾವಳಿ ತಡೆಗೆ ಡಿಎಸ್ ಎಸ್ ಒತ್ತಾಯ
    • ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು
    • ವಿದ್ಯಾರ್ಥಿಗಳಿಗೆ ಶಿಕ್ಷಕರು ಹೃದಯವಂತಿಕೆಯಿಂದ ಶಿಕ್ಷಣ ನೀಡಬೇಕು: ಬಿ.ಅಬ್ದುಲ್ ರಹಮಾನ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜನರ ಹೊಟ್ಟೆಗೆ ಅನ್ನ ನೀಡದ ಬಿಜೆಪಿ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೆ..? ಸಿದ್ಧರಾಮಯ್ಯ ಟೀಕೆ
    ರಾಜ್ಯ ಸುದ್ದಿ October 27, 2022

    ಜನರ ಹೊಟ್ಟೆಗೆ ಅನ್ನ ನೀಡದ ಬಿಜೆಪಿ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೆ..? ಸಿದ್ಧರಾಮಯ್ಯ ಟೀಕೆ

    By adminOctober 27, 2022No Comments3 Mins Read

    ಜನರ ಹೊಟ್ಟೆಗೆ ಸಮರ್ಪಕವಾದ ಅನ್ನ ನೀಡದ ಬಿಜೆಪಿಯವರಿಂದ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

    ಜಗತ್ತಿನ ಜನರ ಮುಂದೆ ಹಸಿವು, ಸ್ವಾತಂತ್ರ್ಯ, ಮಹಿಳೆಯರ ದುಡಿಮೆ ಮುಂತಾದ ವಿಷಯಗಳಲ್ಲಿ ಭಾರತದ ಮರ್ಯಾದೆ ಹರಾಜಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಟೀಕಿಸಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಮೂಲಕ ಈ ಕೆಳಕಂಡಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


    Provided by
    Provided by

    ಮೋದಿಯವರನ್ನು ಟೀಕಿಸಿದವರ ವಿರುದ್ಧ ಪ್ರತಿಭಟಿಸಿ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪನವರಿಗೆ ಮತ್ತು ಬಿಜೆಪಿಯವರಿಗೆ ನಾನು 32 ಪ್ರಶ್ನೆಗಳನ್ನು ಕೇಳಿದ್ದೆ. ಇದುವರೆಗೆ ಬಿಜೆಪಿಯವರಿಗೆ ಮತ್ತು ಯಡಿಯೂರಪ್ಪನವರಿಗೆ ಒಂದೇ ಒಂದು ಪ್ರಶ್ನೆಗೂ ಉತ್ತರಿಸಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 121 ದೇಶಗಳ ಪೈಕಿ 107 ನೇ ಸ್ಥಾನಕ್ಕೆ ಕುಸಿದಿದೆಯೆಂಬ ವರದಿ ಬಿಡುಗಡೆಯಾಯಿತು. ಬಿಜೆಪಿಯವರು ಯಥಾಪ್ರಕಾರ ಈ ವರದಿಯೆ ಸರಿ ಇಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ದಾಖಲೆಗಳನ್ನು ಆಧರಿಸಿಯೆ ವರದಿ ಸಿದ್ಧಪಡಿಸಲಾಗಿದೆ ಎಂಬ ಸಾಕ್ಷ್ಯಗಳನ್ನು ಸಮೀಕ್ಷೆ ಮಾಡಿದವರು ತೋರಿಸಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5 ರಲ್ಲಿನ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹಸಿವಿನ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆಯೆಂದು ತಿಳಿಸಿದ ಮೇಲೆ ಬಿಜೆಪಿಯವರು ಆಕ್ಷೇಪಗಳನ್ನು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

    2017 ರಲ್ಲಿ 100 ನೇ ಸ್ಥಾನದಲ್ಲಿದ್ದ ಭಾರತ 2018 ರಲ್ಲಿ 103 ನೇ ಸ್ಥಾನಕ್ಕೆ ಕುಸಿಯಿತು. ಈಗ 121 ದೇಶಗಳ ಪೈಕಿ 107 ನೇ ಸ್ಥಾನ. ನಮ್ಮ ನಂತರ ಕೇವಲ 15 ದೇಶಗಳಿವೆ. ದುರದೃಷ್ಟವೆಂದರೆ ನಮಗಿಂತ ಮೇಲೆ ಇಥಿಯೋಪಿಯ, ಕೀನ್ಯಾ, ಸುಡಾನ್ ಮುಂತಾದ ದೇಶಗಳಿವೆ.

    ನಮ್ಮ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ 99 ನೇ ಸ್ಥಾನ, ಬಾಂಗ್ಲಾ ದೇಶ 84 ನೇ ಸ್ಥಾನ, ನೇಪಾಳ 81 ನೇ ಸ್ಥಾನ, ನಮ್ಮದು 107 ನೇ ಸ್ಥಾನ. ಇದು ದೇಶಕ್ಕೆ ಹೆಮ್ಮೆ ತರುವ ಸಂಗತಿಯೆ? ತನ್ನ ಜನರ ಹೊಟ್ಟೆಗೆ ಸಮರ್ಪಕವಾಗಿ ಅನ್ನ ಸಿಗುವಂತೆ ನೋಡಿಕೊಳ್ಳದ ದೇಶ ವಿಶ್ವಗುರುವಾಗಲು ಸಾಧ್ಯವೆ? ಹಸಿವಿನ ಸೂಚ್ಯಂಕವನ್ನು ಜನರ ಅಪೌಷ್ಟಿಕತೆ, ಶಿಶುಮರಣ, ಮಕ್ಕಳ ವಯಸ್ಸಿಗನುಗುಣವಾಗಿ ಎತ್ತರ ಮತ್ತು ತೂಕಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡು ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಪರಿಸ್ಥಿತಿ ಹೀಗಿದ್ದರೂ ಬಿಜೆಪಿಯು ಅತ್ಯಂತ ಕ್ಷುಲ್ಲಕವಾದ ಆಹಾರದ ರಾಜಕಾರಣವನ್ನು ಮಾಡುತ್ತಿದೆ. ಮಾಂಸಾಹಾರದ ಮೇಲೆ ದಾಳಿ ನಡೆಸುತ್ತಿದೆ. ಮನುಷ್ಯರಿಗೆ ಅತ್ಯಂತ ಅಗತ್ಯವಾಗಿ ಬೇಕಾದ ಪ್ರೋಟೀನುಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

    ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿ ಬಿಪಿಎಲ್ ಕಾರ್ಡುದಾರರಿಗೆ ತೊಗರಿಬೇಳೆ ನೀಡುತ್ತಿದ್ದೆವು. ಬೇಳೆ ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿ 3 ವರ್ಷಗಳಾದವು. ಮನಮೋಹನಸಿಂಗರ ನೇತೃತ್ವದ ಸರ್ಕಾರ ಆಹಾರ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ಅದನ್ನು ಕಡ್ಡಾಯವಾದ ಹಕ್ಕನ್ನಾಗಿಸಿತು. ಜನರಿಗೆ ಸಮರ್ಪಕವಾದ ಅನ್ನ ನೀಡಬೇಕಾದುದು ಸರ್ಕಾರದ ಜವಾಬ್ಧಾರಿ. ಆದರೆ ಬಡಜನರನ್ನು ಹಸಿವು ಮುಂತಾದ ಸಂಕಷ್ಟಗಳಿಂದ ಮೇಲೆತ್ತಲು ನೀಡುತ್ತಿರುವ ಸಬ್ಸಿಡಿಗಳನ್ನೆ ರದ್ದು ಮಾಡಬೇಕೆಂದು ಬಿಜೆಪಿ ಪ್ರತಿಪಾದಿಸುತ್ತಿದೆ.

    ಜಾಗತಿಕ ಸಂಸ್ಥೆಗಳು ನಿರಂತರವಾಗಿ ಬಿಡುಗಡೆ ಮಾಡುತ್ತಿರುವ ಅಧ್ಯಯನ ವರದಿಗಳು ಮತ್ತು ಅಂಕಿಅಂಶಗಳನ್ನು ತಳ್ಳಿ ಹಾಕಲೆತ್ನಿಸುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯು ಯೋಜನಾ ಆಯೋಗವನ್ನೆ ಬರ್ಖಾಸ್ತು ಮಾಡಿದೆ. ಕೇಂದ್ರ ಸರ್ಕಾರವು ನಿಗಧಿತವಾಗಿ ನಡೆಸುವ ಅಧ್ಯಯನಗಳನ್ನೆ ನಿಲ್ಲಿಸಿಬಿಟ್ಟಿದೆ. ಮುಖ್ಯವಾಗಿ ಸಿಎಜಿ ಆಡಿಟ್ಟುಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ರಾಷ್ಟ್ರೀಯ ಅಂಕಿ ಅಂಶಗಳ ಇಲಾಖೆಯು ನಡೆಸುವ ಸರ್ವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.

    ಯುಪಿಎ ಸರ್ಕಾರ ನಡೆಸಿದ ಸರ್ವೆಗಳನ್ನು ಬಿಟ್ಟರೆ ಹೊಸ ಸರ್ವೆಗಳು ನಡೆದಿಲ್ಲ. 2018 ರಲ್ಲಿ ಎನ್‍ಎಸ್‍ಎಸ್‍ಒ ಸರ್ವೆ ನಡೆಸಿತಾದರೂ ಅದರ ಅಂಕಿಅಂಶಗಳು ಕೇಂದ್ರ ಸರ್ಕಾರಕ್ಕೆ ವಿರುದ್ಧವಾಗಿದ್ದ ಕಾರಣ ವರದಿಯನ್ನೆ ಬಿಡುಗಡೆ ಮಾಡಲಿಲ್ಲ. 2021 ರಲ್ಲಿ ದೇಶದ ಜನಗಣತಿ ನಡೆಯಬೇಕಾಗಿತ್ತು. ಕೋವಿಡ್ ಮುಗಿದ ಕೂಡಲೆ ಜಗತ್ತಿನ ಅನೇಕ ದೇಶಗಳು ಜನಗಣತಿ ನಡೆಸಿದವು. ಮೋದಿ ಸರ್ಕಾರ ಇದುವರೆಗೂ ಏನನ್ನೂ ಮಾಡದೆ ಸುಮ್ಮನೆ ಕೂತಿದೆ. ಜನಗಣತಿ ನಡೆದರೆ ಕೋವಿಡ್‍ನಿಂದ ಮರಣ ಹೊಂದಿದ ಜನರ ವಿವರವೂ ಸೇರಿದಂತೆ ಅನೇಕ ಸಂಗತಿಗಳು ಬಹಿರಂಗವಾಗುತ್ತವೆ ಎಂದು ಮೌನ ವಹಿಸಲಾಗಿದೆ.

    ಮೋದಿಯವರು ಭಾರತವನ್ನು ಯಾವ ದುರ್ಗತಿಗೆ ಇಳಿಸಿದ್ದಾರೆಂದರೆ 2014 ರಲ್ಲಿ ಭಾರತದ ತಲಾವಾರು ಜಿಡಿಪಿ 1573 ಡಾಲರುಗಳಷ್ಟಿತ್ತು. 2022 ರಲ್ಲಿ 1850 ಡಾಲರುಗಳಷ್ಟಿರಲಿದೆ ಎಂದು ಅಂದಾಜು ಮಾಡಲಾಗಿದೆ.
    ಬಾಂಗ್ಲಾದೇಶದಲ್ಲಿ 2014 ರಲ್ಲಿ 1118 ಡಾಲರುಗಳಷ್ಟಿದ್ದ ತಲಾವಾರು ಜಿಡಿಪಿಯು 2021 ರಲ್ಲಿ 2503 ಡಾಲರುಗಳಷ್ಟಾಗಿತ್ತೆಂದು ಅಂಕಿ ಅಂಶಗಳು ಹೇಳುತ್ತಿವೆ. ವಿಶ್ವಬ್ಯಾಂಕಿನ ಅಂಕಿ ಅಂಶಗಳು ಭಾರತದಲ್ಲಿ ಇನ್ನೂ ದಯನೀಯವಾದ ಪರಿಸ್ಥಿತಿಯಿದೆಯೆಂದು ಹೇಳುತ್ತಿವೆ. ಮನಮೋಹನಸಿಂಗರು 2004 ರಲ್ಲಿ ಪ್ರಧಾನಿಯಾದಾಗ ಭಾರತದ ತಲಾವಾರು ಜಿಡಿಪಿಯು 546 ಡಾಲರುಗಳಿಷ್ಟಿತ್ತು. ಅವರು ಅಧಿಕಾರದಿಂದ ಇಳಿಯುವ ವೇಳೆಗೆ 1500 ಡಾಲರಿಗೂ ಅಧಿಕ ಪ್ರಮಾಣದಲ್ಲಿತ್ತು.

    ಯುಪಿಎ ಕಾಲದಲ್ಲಿ 3 ಪಟ್ಟು ಆದಾಯವು ಹೆಚ್ಚಾಗಿತ್ತು. ಆದರೆ ಮೋದಿಯಯವರ 8 ವರ್ಷಗಳ ಅವಧಿಯಲ್ಲಿ ಕೇವಲ 350 ಡಾಲರುಗಳು ಮಾತ್ರ ಹೆಚ್ಚಾಗಿದೆ ಎಂಬ ಅಂಶವು ಆಘಾತಕಾರಿಯಾಗಿದೆ. ಹಣದುಬ್ಬರವನ್ನು ಲೆಕ್ಕ ಹಾಕಿದರೆ ಇದು ನೆಗೆಟಿವ್ ಬೆಳವಣಿಗೆಯಾಗುತ್ತದೆ. ಬಹುಪಾಲು ಜನರಿಗೆ ನಿಧಾನಕ್ಕೆ ಅರ್ಥವಾಗುತ್ತಿರುವ ಸಂಗತಿ, ‘ನಮೋ’ ಎಂದರೆ ಜನರನ್ನು “ ನಂಬಿಸಿ ಮೋಸ ಮಾಡುವವರು” ಎಂದು. ನಂಬಿಸಿ ಮೋಸ ಮಾಡಿದ್ದೆ ಮೋದಿಯವರು ಈ ದೇಶದ ಜನರಿಗೆ ಕೊಟ್ಟ ಮಹಾನ್ ಕೊಡುಗೆ.

    ಇಂದು ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಸರ್ವರಂಗಗಳಲ್ಲೂ ವಿಫಲವಾಗಿದೆ. ದೇಶವು ಭಾರಿ ಗಂಡಾಂತರವನ್ನು ಎದುರಿಸುತ್ತಿದೆ. ಸುಳ್ಳು ಭಾಷಣಗಳನ್ನು ಬಿಟ್ಟರೆ ಯಾವ ಸಾಧನೆಯೂ ಇಲ್ಲ. ಭಾರತವನ್ನು ಹಿಂದೆ ತಳ್ಳಿ ನಮ್ಮ ಅಕ್ಕ ಪಕ್ಕದ ದೇಶಗಳು ಮುಂದು ಮುಂದಕ್ಕೆ ಹೋಗುತ್ತಿವೆ. ಈ ವಿಚಾರವನ್ನು ಮರೆಮಾಚುವುದಕ್ಕೋಸ್ಕರವೆ ಧರ್ಮ, ಜಾತಿ, ಕೋಮು ದ್ವೇಷಗಳನ್ನು ಮುಂದೆ ಮಾಡಿಕೊಂಡು ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ದೇಶ ಒಂದೇ ಸಮನೆ ಅಧಃಪತನದ ಹಾದಿ ಹಿಡಿದಿದ್ದರೂ ಅದನ್ನು ಉದ್ಧಾರವಾಗುತ್ತಿದೆಯೆಂದು ಬಿಂಬಿಸಲಾಗುತ್ತಿದೆ. ಇದನ್ನು ಅರಿತುಕೊಳ್ಳದಿದ್ದರೆ ಈ ದೇಶದ ಬಡವರು, ಮಧ್ಯಮವರ್ಗದವರು, ದಲಿತರು, ರೈತರು, ಹಿಂದುಳಿದವರು, ಪಶುಪಾಲಕರು, ಆದಿವಾಸಿಗಳು, ಮಹಿಳೆಯರು, ಕಾರ್ಮಿಕರು, ಕುಶಲಕರ್ಮಿಗಳಾದಿಯಾಗಿ ಯಾರಿಗೂ ಉಳಿಗಾಲವಿಲ್ಲ ಎಂದು ತಿಳಿಸಿದ್ದಾರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ:  ಸಿಎಂ ಸಿದ್ದರಾಮಯ್ಯ

    November 8, 2025

    ಬೈಕ್ ಟಾಕ್ಸಿ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ

    November 8, 2025

    ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!

    November 8, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು

    November 12, 2025

    ಪಾವಗಡ: ಪಟ್ಟಣದ ಕಾಳಿದಾಸ ನಗರದಲ್ಲಿ ಸೋಮವಾರ ರಾತ್ರಿ ಮನೆಯ ಬೀಗ ಒಡೆದು, ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಓಬಳಮ್ಮ…

    ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ

    November 12, 2025

    ಕೂಲಿ ಕೊಡದೇ ಗಾರ್ಮೆಂಟ್ಸ್‌ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

    November 12, 2025

    ಸರಗೂರು |  ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ

    November 12, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.