ಮೈಸೂರು: ಮೇಲ್ಜಾತಿಯಲ್ಲಿರುವವರು ಮೀಸಲಾತಿಗೆ ಅರ್ಹರಲ್ಲ, ಅವರಿಗೆ 10% ಮೀಸಲಾತಿ ಕೊಟ್ಟಿದ್ದಾರೆ ಅದು ಸರಿನಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ನಡೆದ ವಿಶ್ವಕರ್ಮ ಸಮುದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಹಿಂದುಳಿದಿದ್ದಾರೋ ಅವರಿಗೆ ಮಾತ್ರ ಮೀಸಲಾತಿ ಸಿಗಬೇಕು. ಯಾವ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಹೇಳಿ. ಬಸವಣ್ಣ ಅನುಭವ ಮಂಟಪ ಮಾಡಿ ಸಮಾನ ಅವಕಾಶ ಕೊಟ್ಟರು.
ಅದಕ್ಕಾಗಿ ನಾವು ಬಸವಣ್ಣರಿಗೆ ಗೌರವ ಕೊಡುತ್ತೇವೆ. ಜಾತಿ ವ್ಯವಸ್ಥೆ ಇರಬಾರದು ಎಲ್ಲರೂ ಮನುಷ್ಯರಾಗಿ ಬದುಕಬೇಕು. ಅಧಿಕಾರ ಸಮಾನವಾಗಿ ಹಂಚಿಕೆಯಾದ್ರೆ ಜಾತಿ ವ್ಯವಸ್ಥೆ ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಾವಿಯಲ್ಲಿ ನೀರು ಸೇದಲು ಹೋಗುತ್ತಿದ್ದೆ. ಬಾವಿ ಕಸವನ್ನು ಪಕಕ್ಕೆ ತಳ್ಳಿ ನೀರು ಸೇದುತ್ತೇವೆ. ಮತ್ತೆ ಕಸ ಸೇರಿಕೊಳ್ಳುತ್ತದೆ. ಇದೇ ರೀತಿ ಸದ್ಯ ಸಮಾಜ ಆಗಿದೆ. ರಘು ಆಚಾರ ಆರ್ಥಿಕವಾಗಿ ಸಬಲರಾದ ಕಾರಣ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತಾನೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


