ಹಿರಿಯೂರು: ಪುನೀತ್ ರಾಜ್ ಕುಮಾರ್ ಅವರ ಸಾಕ್ಷ್ಯ ಚಿತ್ರ ಗಂಧದ ಗುಡಿ ಚಿತ್ರ ನಂಜುಡೇಶ್ವರ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ. ಆದರೆ ಕಾಂತಾರ ಚಿತ್ರ ಕೂಡ ಇದೇ ಸಂದರ್ಭದಲ್ಲಿ ಇದೇ ಟಾಕಿಸ್ ನಲ್ಲಿ ಪ್ರದರ್ಶನವಾಗುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ದಿನದಲ್ಲಿ ಒಟ್ಟು ನಾಲ್ಕು ಶೋಗಳು ಪ್ರದರ್ಶನವಾಗುತ್ತಿವೆ. ಈ ಪೈಕಿ ಎರಡು ಶೋ ಕಾಂತಾರ ಚಿತ್ರ ಪ್ರದರ್ಶನಗೊಳ್ಳಲಿದ್ದು, 2 ಶೋ ಗಂಧದ ಗುಡಿ ಚಿತ್ರ ಪ್ರದರ್ಶನಗೊಳಿಸಲು ಟಾಕಿಸ್ ಮಾಲಕರು ನಿರ್ಧರಿಸಿದ್ದಾರೆ. ಆದರೆ, ಇದರ ವಿರುದ್ಧ ಜಯ ಕರ್ನಾಟಕ ರಕ್ಷಣಾ ಸೇನೆ, ಹಾಗೂ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಥಿಯೇಟರ್ ಮಾಲೀಕರ ಒಂದು ಕುತಂತ್ರದಿಂದ ಅಪ್ಪು ಕೊನೆಯ ಚಿತ್ರಕ್ಕೆ ಸಮಸ್ಯೆಯಾಗಿದೆ. ನಂಜುಂಡೇಶ್ವರ ಚಿತ್ರಮಂದಿರದಲ್ಲಿ ಕಾಂತಾರ ಚಲನ ಚಿತ್ರವು ಈಗ ನಡೆಯುತ್ತಿದ್ದು ಎರಡು ಶೋ ಕಾಂತಾರ ಹಾಗೂ ಎರಡು ಶೋ ಗಂಧದ ಗುಡಿ ಸಿನಿಮಾ ನಡೆಸುವುದಾಗಿ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬೇರೆ ಯಾವುದಾದರೂ ಚಿತ್ರಮಂದಿರಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಚಲನಚಿತ್ರ ಕೊಟ್ಟು ನಾಲ್ಕು ಶೋ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಇದೀಗ ಗಂಧದಗುಡಿ ಚಿತ್ರ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿರುವ ಪುಷ್ಪಾಂಜಲಿ ಚಿತ್ರ ಮಂದಿರದಲ್ಲಿ ನಾಲ್ಕು ಶೋ ಪ್ರದರ್ಶನ ನಡೆಸಲು ನಿರ್ಧರಿಸಿದೆ.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


