ಉತ್ತರ ಕೊರಿಯಾ ದೂರಗಾಮಿ ಮತ್ತು ಸಮೀಪದ ಮೂರು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದರಿಂದ ದಕ್ಷಿಣ ಕೊರಿಯಾ ಹಾಗೂ ಜಪಾನ್ ನಾಗರಿಕರಿಗೆ ಅಲರ್ಟ್ ಘೋಷಿಸಿದೆ.
ದಕ್ಷಿಣ ಕೊರಿಯಾದ ದ್ವೀಪಗಳಲ್ಲಿ ಆಸರೆ ಪಡೆದಿರುವ ನಾಗರಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಪಾನ್ ಸೂಚಿಸಿದೆ.
ಪಿಯೊಗಾಂಗ್ ಬಳಿಯ ಸುನಾನ್ ದ್ವೀಪದ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು ತಲುಪುವ ಸಾಮರ್ಥ್ಯದ ದೂರಗಾವಿ ಕ್ಷಿಪಣಿ ಬುಧವಾರ ಬೆಳಿಗ್ಗೆ 7.30ಕ್ಕೆ ಉಡಾಯಿಸಲಾಗಿದೆ ಎಂದು ಉತ್ತರ ಕೊರಿಯಾದ ಸೇನೆ ಹೇಳಿಕೆ ನೀಡಿದೆ.
ಇದೇ ವೇಳೆ ಎರಡು ಕಡಿಮೆ ದೂರ ಗುರಿ ಮುಟ್ಟುವ ಕ್ಷಿಪಣಿಗಳನ್ನು ಬುಧವಾರ ಬೆಳಿಗ್ಗೆ 8.49ಕ್ಕೆ ಪರೀಕ್ಷಿಸಲಾಯಿತು ಎಂದು ಸೇನೆ ಹೇಳಿಕೊಂಡಿದೆ.
ಹಿಂದಿನ ದಿನವಷ್ಟೇ ಒಂದೇ ದಿನ 20 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷೆಗೊಳಪಡಿಸಿದ್ದು, ಇದರಲ್ಲಿ ಒಂದು ಕ್ಷಿಪಣಿ ದಕ್ಷಿಣ ಕೊರಿಯಾ ವ್ಯಾಪ್ತಿಯ ಸಮುದ್ರದಲ್ಲಿ ಬಿದ್ದಿದೆ ಎಂದು ವರದಿಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy