ಪ್ರಭಾವಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ಬಳಕೆದಾರರು ಬ್ಲೂ ಟಿಕ್ ಗಳಿಸಬೇಕಾದರೆ ಮಾಸಿಕ 8 ಡಾಲರ್ ಅಂದರೆ 660 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ಸುಮಾರು ಒಂದು ತಿಂಗಳ ಗೊಂದಲದ ನಂತರ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಎಲಾನ್ ಮಸ್ಕ್, ಟ್ವಿಟರ್ ನಿಯಮಗಳಲ್ಲಿ ಬದಲಾವಣೆ ರೂಪಿಸುತ್ತಿದ್ದು, ಇದುವರೆಗೆ ಟ್ವಿಟರ್ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಲಾಗುತ್ತಿರಲಿಲ್ಲ.
ಎಲಾನ್ ಮಸ್ಕ್ ಎರಡು ದಿನಗಳ ಹಿಂದೆಯಷ್ಟೇ ಟ್ವಿಟರ್ ಬ್ಲೂ ಟಿಕ್ ಗ್ರಾಹಕರು 20 ಡಾಲರ್ ಅಂದರೆ ಮಾಸಿಕ ಸುಮಾರು 1500 ರೂ. ಮಾಸಿಕ ಶುಲ್ಕ ಪಾವತಿಸಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ 8 ಡಾಲರ್ ಅಂದರೆ 660 ರೂ. ಶುಲ್ಕ ವಿಧಿಸುವುದಾಗಿ ಹೇಳಿದ್ದಾರೆ.
ಬ್ಲೂ ಟಿಕ್ ಗ್ರಾಹಕರು ಮಾಸಿಕ 660 ರೂ. ಪಾವತಿಸಿದರೆ ನಕಲಿ ಖಾತೆಗಳ ಹಾವಳಿ ತಡೆಗಟ್ಟಬಹುದು. ಟ್ವಿಟರ್ ಗೆ ನಿಜವಾದ ಸಮಸ್ಯೆ ಇರುವುದು ನಕಲಿ ಖಾತೆಗಳ ಹಾವಳಿ ಎಂದು ಎಲಾನ್ ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy