ರಿಯಾಲಿಟಿ ಶೋ ನಡೆಸಿಕೊಡುವ ಸೃಜನ್ ಲೋಕೇಶ್ ಮತ್ತು ಸಚಿವ ಸೋಮಣ್ಣ ಪುತ್ರರ ಗುಂಪುಗಳ ನಡುವೆ ಬೆಂಗಳೂರಿನಲ್ಲಿ ಬುಧವಾರ ತಡರಾತ್ರಿ ಕ್ಲಬ್ ನಲ್ಲಿ ಹೊಡೆದಾಟ ನಡೆದಿದೆ.
ಅಪ್ಪು ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್ಗೆ ಪ್ರಾಕ್ಟೀಸ್ ವೇಳೆ ಜಗಳ ನಡೆದಿದೆ. ಟೂರ್ನಮೆಂಟ್ಗೆ ಸೃಜನ್ ಲೋಕೇಶ್ ಟೀಂ ಪ್ರಾಕ್ಟೀಸ್ ಮಾಡಿ ನಂತರ ಪಾರ್ಟಿ ಮಾಡಿದ್ದಾರೆ. ಈ ವೇಳೆ ಯಾಕೆ ಜೋರಾಗಿ ಕಿರುಚಾಡುತ್ತಿದ್ದೀರಾ ಎಂದು ಅರುಣ್ ಪ್ರಶ್ನಿಸಿದ್ದಾರೆ. ಈ ಸಮಯ ಅರುಣ್, ಸೃಜನ್ ಲೋಕೇಶ್ ಟೀಂ ನಡುವೆ ವಾಗ್ವಾದ ನಡೆದಿದೆ.
ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಹೊಡೆದಾಟವಾಗಿದೆ. ಆದ್ರೆ ಘಟನೆ ಬಗ್ಗೆ ಗುಂಪುಗಳು, ಕ್ಲಬ್ ಆಡಳಿತ ಮಂಡಳಿ ದೂರು ನೀಡಿಲ್ಲ. ಗಲಾಟೆ ವೇಳೆ ನಟ ಸೃಜನ್ ಲೋಕೇಶ್ ಕಿಂಗ್ಸ್ ಕ್ಲಬ್ನಲ್ಲಿ ಇರಲಿಲ್ಲ. ವಿಕಾಸ್ ಮತ್ತು ಅರುಣ್ ಸೋಮಣ್ಣ ನಡುವೆ ಘಟನೆ ನಡೆದಿದೆ ಎನ್ನಲಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆ ಸಂಬಂಧ ಟಿವಿ9ಗೆ ವಸತಿ ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನಟ ಸೃಜನ್ ಲೋಕೇಶ್ರನ್ನು ನೇರವಾಗಿ ನೋಡಿಯೇ ಇಲ್ಲ. ನಟ ಸೃಜನ್ ಲೋಕೇಶ್ ಜೊತೆ ನಮಗೆ ಯಾವುದೇ ಸಂಬಂಧವಿಲ್ಲ. ಜೀವನದಲ್ಲಿ ಎಂದೂ ನಟ ಸೃಜನ್ ಲೋಕೇಶ್ ಭೇಟಿಯಾಗಿಲ್ಲ.
ಯಾವುದೇ ರಾಜಿಸಂಧಾನ ಕೂಡ ಆಗಿಲ್ಲ. ಕಿಂಗ್ಸ್ ಕ್ಲಬ್ನಲ್ಲಿ ನಾವು ಯಾರ ಜೊತೆಗೂ ಗಲಾಟೆ ಮಾಡಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಇಂತಹ ಆರೋಪ ಮಾಡುತ್ತಿದ್ದಾರೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


